ನೀಮ್ಯೂಚ್: ಮಂಡ್ಸೂರ್ ರೈತರ ಭೇಟಿಗೆ ತೆರಳುತ್ತಿದ್ದ ಪಟೇಲ್ ಖೋಟಾ ಹೋರಾಟಗಾರ ಹಾರ್ದಿಕ್ ಪಟೇಲ್ ನನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ನಡೆದ ರೈತರ ಪ್ರತಿಭಟನೆ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ರೈತರ ಕುಟುಂಬಸ್ಥರನ್ನು ಭೇಟಿ ಮಾಡಲು ಹಾರ್ದಿಕ್ ಪಟೇಲ್ ತೆರಳುತ್ತಿದ್ದರು.
ಮುಂದೆ ಸಂಭವಿಸಬಹುದಾದ ಅಪಾಯವನ್ನು ತಡೆಗಟ್ಟುವ ಸಲುವಾಗಿ ಮುಂದಾಗ್ರತಾ ಕ್ರಮವಾಗಿ ಹಾರ್ದಿಕ್ ಪಟೇಲ್ ರನ್ನು ನ್ಯೂಮುಚ್ ನ ನಯಾಗೌನ್ ನಲ್ಲಿ ಬಂಧಿಸಲಾಗಿದೆ ಎಂದು ಎಸ್ ಪಿ ಅಭಿಷೇಕ್ ದಿವಾನ್ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಮತ್ತು ಜನತಾ ದಳ(ಯು) ಮುಖಂಡ ಅಖಿಲೇಶ್ ಕಟಿಯಾರ್ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ, ಪೊಲೀಸ್ ವಾಹನದಲ್ಲಿ ಕರೆದೊಯ್ದು ಮಧ್ಯಪ್ರದೇಶದಿಂದ ಹೊರಭಾಗಕ್ಕೆ ಬಿಟ್ಟಿದ್ದಾರೆ.