ಸಾಂದರ್ಭಿಕ ಚಿತ್ರ 
ದೇಶ

ದೆವ್ವ ಬಿಡಿಸುವುದಾಗಿ ಹೇಳಿ ಯುವತಿಗೆ ಬಲವಂತವಾಗಿ ಎಮ್ಮೆ ಸಗಣಿ ತಿನ್ನಿಸಿದ ಮಾಂತ್ರಿಕ!

ದೆವ್ವ ಬಿಡಿಸುವುದಾಗಿ ಹೇಳಿದ ಮಾಂತ್ರಿಕನೊಬ್ಬ 17 ವರ್ಷದ ಯುವತಿಗೆ ಬಲವಂತವಾಗಿ ಎಮ್ಮೆ ಸಗಣಿ ತಿನ್ನಿಸಿರುವ ಘಟನೆ ಲಾತೂರ್...

ಲಾತೂರ್: ದೆವ್ವ ಬಿಡಿಸುವುದಾಗಿ ಹೇಳಿದ ಮಾಂತ್ರಿಕನೊಬ್ಬ 17 ವರ್ಷದ ಯುವತಿಗೆ ಬಲವಂತವಾಗಿ ಎಮ್ಮೆ ಸಗಣಿ ತಿನ್ನಿಸಿರುವ ಘಟನೆ ಲಾತೂರ್ ನಲ್ಲಿ ನಡೆದಿದೆ.
ಕಳೆದ ವಾರ ಮಹಾರಾಷ್ಟ್ರದ ದಂಗರವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಪ್ರಕರಣ ದಾಖಲಿಸಿದ ನಂತರ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ ಗಂಡಸರ ಜೊತೆ ಯುವತಿ ಪ್ರತಿನಿತ್ಯ ಅನಾವಶ್ಯಕವಾಗಿ ಜಗಳವಾಡುತ್ತಿದ್ದಳು. ಇದು ದೆವ್ವದ ಪ್ರಭಾವ ಎಂದು ನಂಬಿದ ಕುಟುಂಬಸ್ಥರು ಯುವತಿಯನ್ನು ಬಲವಂತವಾಗಿ ಮಾಂತ್ರಿಕನ ಬಳಿ ಕರೆದೊಯ್ದಿದ್ದಾರೆ.
ಆದರೆ ಯುವತಿ ಆತನಿಂದ ಚಿಕಿತ್ಸೆ ಪಡೆಯಲು ನಿರಾಕರಿಸಿದಾಗ ಕೋಪಗೊಂಡ ಮಾಂತ್ರಿಕ ಆಕೆಯ ಕೈಕಾಲು ಕಟ್ಟುವಂತೆ ಸಂಬಂಧಿಕರಿಗೆ ಹೇಳಿದ್ದಾನೆ. ಅದರಂತೆ ಆಕೆಯ ಕುಟುಂಬಸ್ಥರು ಯುವತಿ ಕೈಕಾಲು ಕಟ್ಟಿ ನೆಲದ ಮೇಲೆ ಮಲಗಿಸಿದ್ದಾರೆ.
ನಂತರ ಮಾಂತ್ರಿಕ ಆಕೆಯ ಬಾಯಿಗೆ ಬಲವಂತವಾಗಿ ಎಮ್ಮೆ ಸಗಣಿ ಹಾಕಿ ನುಂಗುವಂತೆ ಮಾಡಿದ್ದಾನೆ. ಈ ಘಟನೆಯನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಯ ಬಿಟ್ಟಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಲವಾರು ಮಂದಿ ಇದನ್ನು ಖಂಡಿಸಿದ್ದಾರೆ. 
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಚಾಕೂರು ಪೊಲೀಸರು ಯುವತಿಯ ಐವರು ಸಂಬಂಧಿಕರನ್ನು ಬಂಧಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT