ವೃದ್ಧಾಶ್ರಮ (ಸಂಗ್ರಹ ಚಿತ್ರ) 
ದೇಶ

ವೃದ್ಧ ಪೋಷಕರನ್ನು ಆಶ್ರಮಕ್ಕೆ ಕಳುಹಿಸಿದರೆ ಮಾಸಿಕ 30 ಸಾವಿರ ಪರಿಹಾರ ಕೊಡಿ!

ಮಹತ್ವದ ಬೆಳವಣಿಗೆಯೊಂದರಲ್ಲಿ ವೃದ್ಧ ಪೋಷಕರನ್ನು ತೊರೆಯುವ ಮಕ್ಕಳ ವಿರುದ್ಧ ಛಾಟಿ ಬೀಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಶ್ರಮಕ್ಕೆ ತೆರಳುವ ಪೋಷಕರಿಗೆ ಮಾಸಿಕ 30 ಸಾವಿರ ರು.ಹಣವನ್ನು ನೀಡಬೇಕು ಎನ್ನುವ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ವೃದ್ಧ ಪೋಷಕರನ್ನು ತೊರೆಯುವ ಮಕ್ಕಳ ವಿರುದ್ಧ ಛಾಟಿ ಬೀಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಶ್ರಮಕ್ಕೆ ತೆರಳುವ ಪೋಷಕರಿಗೆ ಮಾಸಿಕ 30 ಸಾವಿರ ರು.ಹಣವನ್ನು ನೀಡಬೇಕು  ಎನ್ನುವ ಹೊಸ ಕಾನೂನು ರಚನೆ ಮಾಡಲು ಸರ್ಕಾರ ಮುಂದಾಗಿದೆ.

ಮಕ್ಕಳಿಂದ ನಿರ್ಲಕ್ಷಿತರಾಗಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಲಿದ್ದು, ಮಕ್ಕಳಿಂದ ಬೇರ್ಪಟ್ಟು ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರು ಅಥವಾ ತಂದೆ-ತಾಯಂದಿರಿಗೆ ಮಕ್ಕಳು /  ಸಂಬಂಧಿಕರು ನೀಡುವ ಮಾಸಾಶನವನ್ನು ಈಗಿನ 10 ಸಾವಿರ ರು.ನಿಂದ 25 ಸಾವಿರ ರು. ಅಥವಾ 30 ಸಾವಿರ ರು.ಗೆ ಹೆಚ್ಚಿಸಲು ಶಾಸನ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007 ಈಗಾಗಲೇ ಜಾರಿಯಲ್ಲಿದ್ದು, ಅದರಂತೆ ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟವರು) ಹಾಗೂ ಪಾಲಕರು (ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ)  ವೃದ್ಧಾಶ್ರಮಗಳಲ್ಲಿ ಇದ್ದರೆ ಅವರಿಗೆ ಅವರ ಮಕ್ಕಳು ಮಾಸಿಕ 10 ಸಾವಿರ ರು. ನೀಡಬೇಕು ಎಂಬ ನಿಯಮವಿದೆ. ಆದರೆ ಈ ಹಣ ಪಾಲಕರಿಗೆ ಸಾಲುತ್ತಿಲ್ಲ. ಮೇಲಾಗಿ ಹಲವಾರು ಮಕ್ಕಳಿಗೆ ಹೆಚ್ಚಿನ ಮೊತ್ತ ನೀಡುವ ಶಕ್ತಿ ಇದ್ದರೂ  ಕಾನೂನಿನ ನೆಪ ಹೇಳಿ ನೀಡುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಹೀಗಾಗಿ ಮೊತ್ತ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ತರಲಿದ್ದೇವೆ ಎಂದು ಸಾಮಾಜಿಕ ನ್ಯಾಯ ಇಲಾಖೆಯ ಕಾರ್ಯದರ್ಶಿ ಲತಾ ಕೃಷ್ಣರಾವ್‌ ಹೇಳಿದ್ದಾರೆ.

ಅಂತೆಯೇ ಮಕ್ಕಳು ಪೋಷಕರಿಗೆ ಹಣ ನೀಡದೇ ಹೋದರೆ  3 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದೂ ಕೂಡ ಅವರು ತಿಳಿಸಿದ್ದಾರೆ. ಭಾರತದಲ್ಲಿ 11 ಕೋಟಿಗೂ ಅಧಿಕ ವೃದ್ಧ ಮತ್ತು  ಹಿರಿಯ ನಾಗರಿಕರು ಇದ್ದು, ಈ  ಪೈಕಿ ಬಹುತೇಕ ಮಂದಿ ಮಕ್ಕಳಿಂದ ಬೇರ್ಪಟ್ಟಿದ್ದಾರೆ. ಹೀಗಾಗಿ ಇದೇ ಮಾನ್ಸೂನ್ ಕಲಾಪದಲ್ಲಿ ಈ ಬಗ್ಗೆ ಕಾಯ್ದೆಗೆ ತಿದ್ದುಪಡಿ ತಂದು ಕಾನೂನು ಜಾರಿಗೊಳಿಸಲಾಗುತ್ತದೆ ಎಂದು ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT