ದೇಶ

ಆಹಾರ ಕ್ರಮ ನಿಯಂತ್ರಣ ಸಾಧ್ಯವಿಲ್ಲ, ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ: ರವಿಶಂಕರ್ ಪ್ರಸಾದ್

Srinivas Rao BV
ನವದೆಹಲಿ: ಜನರ ಆಹಾರ ಕ್ರಮಗಳನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ, ಆದರೆ ದೇಶದಲ್ಲಿ ಬಹುಸಂಖ್ಯಾತರು ಗೋವುಗಳನ್ನು ಪೂಜನೀಯ ಭಾವನೆಯಿಂದ ನೋಡುವುದರಿಂದ ಆಹಾರ ಕ್ರಮದಲ್ಲಿ ಸಮತೋಲನೆ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. 
ದೇಶದಲ್ಲಿ ಅತಿ ಹೆಚ್ಚಿನ ಜನ ಗೋವನ್ನು ಪೂಜನೀಯ ಭಾವನೆಯಿಂದ ಗೌರವಿಸುತ್ತಾರೆ ಎಂಬುದನ್ನು ನಾವು ಮರೆಯಬಾರದು, ಅಂತೆಯೇ ಜನರ ಆಹಾರ ಕ್ರಮಗಳನ್ನೂ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ. ಎರಡರ ನಡುವೆ ಸಮತೋಲನ ಕಂಡುಕೊಳ್ಳುವ ಅಗತ್ಯವಿದೆ ಎಂದು ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರವಿಶಂಕರ್ ಪ್ರಸಾದ್, 2014 ರಿಂದ ಈ ವರೆಗೆ ಮೋದಿ ನೇತೃತ್ವದ ಸರ್ಕಾರದ ಕಾನೂನು ಸಚಿವಾಲಯದ ಪ್ರಮುಖ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದು, ಮಾಧ್ಯಮ ಸಂವಾದದಲ್ಲಿ ಗೋಹತ್ಯೆ ನಿಷೇಧದ ಬಗ್ಗೆಯೂ ಮಾತನಾಡಿದ್ದಾರೆ. ಸಂವಿಧಾನದ ಪರಿಚ್ಛೇಧ 48 ರ ಪ್ರಕಾರ ಸರ್ಕಾರಗಳು ಗೋಸಂತತಿ ಉಳಿಸುವುದಕ್ಕೆ ಹಾಗೂ ಗೋಹತ್ಯೆಯನ್ನು ನಿಷೇಧಿಸುವುದಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. 
SCROLL FOR NEXT