ದೇಶ

ಮೋದಿ ಜತೆ ವೇದಿಕೆ ಹಂಚಿಕೊಳ್ಳಲು ಮೆಟ್ರೋ ಮ್ಯಾನ್ ಶ್ರೀಧರನ್ ಗೆ ಪ್ರಧಾನಿ ಕಚೇರಿಗೆ ಒಪ್ಪಿಗೆ

Lingaraj Badiger
ಕೊಚ್ಚಿ: ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಪಡೆದ ಇ ಶ್ರೀಧರನ್ ಅವರಿಗೆ ಕೊಚ್ಚಿ ಮೋಟ್ರೋ ಉದ್ಘಾಟನಾ ಸಮಾರಂಭದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಗುರುವಾರ ಪ್ರಧಾನಮಂತ್ರಿಗಳ ಕಾರ್ಯಾಲಯ ಒಪ್ಪಿಗೆ ನೀಡಿದೆ.
ಈ ಮುಂಚೆ ಭದ್ರತೆ ದೃಷ್ಟಿಯಿಂದ ಗಣ್ಯರ ಪಟ್ಟಿಯಿಂದ ಶ್ರೀಧರನ್ ಅವರ ಹೆಸರನ್ನು ಕೈಬಿಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿನ್ನೆ ಪ್ರಧಾನಿ ಕಚೇರಿಗೆ ಪತ್ರ ಬರೆದು ಇ ಶ್ರೀಧರನ್ ಅವರಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಕೇರಳ ಸರ್ಕಾರದ ಮನವಿ ಮೇರೆಗೆ ಪ್ರಧಾನಿ ಕಚೇರಿ ಕೊಚ್ಚಿ ಮೆಟ್ರೋ ಉದ್ಘಾಟನಾ ಸಮಾರಂಭದಲ್ಲಿ ಇ ಶ್ರೀಧರನ್ ಹಾಗೂ ಪ್ರತಿಪಕ್ಷ ನಾಯಕರ ಉಪಸ್ಥಿತಿಗೆ ಒಪ್ಪಿಗೆ ನೀಡಿದೆ ಎಂದು ಇಂದು ಕೇರಳ ಸಿಎಂ ಟ್ವೀಟ್ ಮಾಡಿದ್ದಾರೆ.
ಇ.ಶ್ರೀಧರನ್ ಅವರು ಕೊಚ್ಚಿ ಮೆಟ್ರೋ ಯೋಜನೆಯ ಪ್ರಧಾನ ಸಲಹೆಗಾರರಾಗಿದ್ದು, ಮೆಟ್ರೋ ಉದ್ಘಾಟನಾ ಸಮಾರಂಭದ ಗಣ್ಯರ ಪಟ್ಟಿಯಲ್ಲಿ ಶ್ರೀಧರನ್ ಅವರ ಹೆಸರು ಕಣ್ಮರೆಯಾಗಿರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಶ್ರೀಧರನ್ ಅವರು, ವಿಚಾರವನ್ನು ವಿವಾದ ಮಾಡಬೇಡಿ. ಪ್ರಧಾನಿ ಮೋದಿಯವರ ಭದ್ರತೆಯ ಪ್ರಮುಖವಾದದ್ದು. ಭದ್ರತಾ ಸಂಸ್ಥೆಗಳ ಅಧಿಕಾರಿಗಳು ನೀಡುವ ಸಲಹೆ, ಸೂಚನೆಗಳನ್ನು ಕೇಳಬೇಕು. ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುಕ್ಕೆ ನನಗಾವುದೇ ಬೇಸರವಿಲ್ಲ ಎಂದು ಹೇಳಿದ್ದರು.
SCROLL FOR NEXT