ಜಿತೇಂದ್ರ ಸಿಂಗ್ 
ದೇಶ

ಉಗ್ರರನ್ನು ಎದುರಿಸಲು ಭದ್ರತಾ ಪಡೆ ತಂತ್ರಗಳನ್ನು ರೂಪಿಸುತ್ತದೆ: ಜಿತೇಂದ್ರ ಸಿಂಗ್

ಭಯೋತ್ಪಾದಕರನ್ನು ಎದುರಿಸಲು ಭದ್ರತಾ ಪಡೆ ಅರಿವು ಪಡೆದುಕೊಂಡು ಕಾರ್ಯತಂತ್ರಗಳನ್ನು...

ಜಮ್ಮು(ಜಮ್ಮು ಮತ್ತು ಕಾಶ್ಮೀರ): ಭಯೋತ್ಪಾದಕರನ್ನು ಎದುರಿಸಲು ಭದ್ರತಾ ಪಡೆ ಅರಿವು ಪಡೆದುಕೊಂಡು ಕಾರ್ಯತಂತ್ರಗಳನ್ನು ಬದಲಾಯಿಸುತ್ತಿರುತ್ತದೆ ಎಂದು ಪ್ರಧಾನಿ ಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. 
ಉಗ್ರಗಾಮಿಗಳ ಜೊತೆ ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಹೊರವಲಯದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳು 6 ಮಂದಿ ಪೊಲೀಸರನ್ನು ಕೊಂದು ಹಾಕಿದ್ದಾರೆ. ಅವರಲ್ಲಿ ಸ್ಟೇಷನ್ ಹೌಸ್ ಆಫೀಸರ್ ಕೂಡ ಸೇರಿದ್ದಾರೆ. 
ಪೊಲೀಸ್ ಮಹಾ ನಿರ್ದೇಶಕರು ಹೇಳಿದ್ದಕ್ಕಿಂತ ಹೆಚ್ಚಿನದನ್ನು ಹೇಳಬೇಕೆಂದು ನನಗೆ ಅನಿಸುತ್ತಿಲ್ಲ. ಸದ್ಯದಲ್ಲಿಯೇ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಭದ್ರತಾ ಪಡೆ ಕ್ರಮಗಳನ್ನು ತೆಗೆದುಕೊಂಡಿದೆ. ಉಗ್ರಗಾಮಿಗಳ ಬದಲಾಗುವ ತಂತ್ರಗಳಿಗೆ ತಕ್ಕಂತೆ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ ಎಂದು ಸಿಂಗ್ ಮಾಧ್ಯಮಗಳಿಗೆ ಹೇಳಿದರು.
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪೊಲೀಸ್ ಪಡೆ ಮೇಲೆ ಉಗ್ರಗಾಮಿಗಳು ನಿನ್ನೆ ನಡೆಸಿದ ದಾಳಿಯಲ್ಲಿ 6 ಮಂದಿ ಪೊಲೀಸರು ಹತ್ಯೆಯಾಗಿದ್ದಾರೆ.
ಪೊಲೀಸರು ತಮ್ಮ ಜೀಪಿನಲ್ಲಿ ದಿನನಿತ್ಯದ ಸಂಚಾರ ನಡೆಸುತ್ತಿದ್ದಾಗ ಅನಂತ್ ನಾಗ್ ಜಿಲ್ಲೆಯ ತಾಜಿವಾರ ಅಚಬಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವರದಿ ಪ್ರಕಾರ, ಪಾಕಿಸ್ತಾನ ಮೂಲದ ಲಷ್ಕರ್ ಇ-ತೈಬಾ ದಾಳಿಯ ಹೊಣೆ ಹೊತ್ತುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!