ದೇಶ

ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಬಹುದು ಆದರೆ, ಕಾಶ್ಮೀರವನ್ನು ರಕ್ಷಿಸಬಲ್ಲದೇ: ಅಮಿತ್ ಶಾಗೆ ಶಿವಸೇನೆ

Manjula VN
ಮುಂಬೈ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಶಿವಸೇನೆ ವಾಗ್ದಾಳಿಯನ್ನು ಮುಂದುವರೆಸಿದ್ದು, ಚುನಾವಣೆಗಳಲ್ಲಿ ಬಿಜೆಪಿ ಗೆಲವು ಸಾಧಿಸಬಹುದು ಆದರೆ, ಕಾಶ್ಮೀರದವನ್ನು ರಕ್ಷಿಸಬಲ್ಲದೇ ಎಂದು ಸೋಮವಾರ ಪ್ರಶ್ನಿಸಿದ್ದಾರೆ. 
ಈ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಅಮಿತ್ ಶಾ ಹಾಗೂ ಅವರ ಪಕ್ಷದ ನಾಯಕರು ಮಹಾರಾಷ್ಟ್ರ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಕುರಿತಂತೆ ತಲೆಕೆಡಿಸಿಕೊಂಡಿದ್ದಾರೆ. ಆದರೆ, ನಾವು ಕಾಶ್ಮೀರದ ಹಾಗೂ ಡಾರ್ಜಿಲಿಂಗ್ ನಲ್ಲಿ ನಡೆಸುತ್ತಿರುವ ಹಿಂಸಾಚಾರ ಕುರಿತಂತೆ ಚಿಂತನೆ ನಡೆಸುತ್ತಿದ್ದೇವೆಂದು ಹೇಳಿದೆ. 
ಹುತಾತ್ಮ ಯೋಧರಾದ ಯೋಧರ ಸಂಖ್ಯೆಯನ್ನು ಎಲ್ಲಿಯವರೆಗೂ ಎಣಿಸಬೇಕು. ಬಿಜೆಪಿ ಚುನಾವಣೆಗಳಲ್ಲಿ ಗೆಲವು ಸಾಧಿಸಬಹುದು. ಆದರೆ, ಭಾರತದ ಭೂಪಟದಲ್ಲಿ ಕಾಶ್ಮೀರ ಶಾಶ್ವತವಾಗಿರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದೆ. 
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಬಹಿರಂಗವಾಗಿಯೇ ಯೋಧರ ಮೇಲೆ ದಾಳಿ ಮಾಡುತ್ತಿರುವ ಯುವಕರನ್ನು ಬೆಂಬಲಿಸುತ್ತಿದ್ದಾರೆ. ಪ್ರಸ್ತುತ ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಯೋಧರನ್ನು ದೂಷಣೆ ಮಾಡಲಾಗುತ್ತಿದೆ. ರೈತರ ಕುರಿತಂತೆ ಹಾಗೂ ರಾಷ್ಟ್ರ ಕುರಿತ ವಿಚಾರಗಳ ಕುರಿತಂತೆ ನಿಲುವು ತೆಗೆದುಕೊಂಡರೆ, ಅದು ಪಾಠವನ್ನು ಕಲಿಸುವಂತಿರಬೇಕು. ಆದರೆ, ಮೆಹಬೂಬಾ ಮುಫ್ತಿಯವರ ಬಗ್ಗೆ ಬಿಜೆಪಿ ಒಂದು ಪದವನ್ನು ಮಾತನಾಡುವುದಿಲ್ಲ. ಇದರ ಅರ್ಥ ಅವರು ಕಲ್ಲು ತೂರಾಟಗಾರರಿಗೆ ಬೆಂಬಲ ನೀಡುತ್ತಿದ್ದಾರೆಂಬುದೇ. 
ಮಹಾರಾಷ್ಟ್ರ ನಿಮ್ಮ ಆದ್ಯತೆಯಲ್ಲಿಲ್ಲವೇ. ಕಾಶ್ಮೀರದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಡಾರ್ಜಿಲಿಂಗ್ ನಲ್ಲಿ ಮುಗ್ಧ ಜನರನ್ನು ಹತ್ಯೆ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ರಾಜಕೀಯ ಭಿನ್ನತೆಗಳಿರಬಹುದು. ಆದರೆ, ಪ್ರಸ್ತುತ ಇರುವ ಪರಿಸ್ಥಿತಿ ರಾಜಕೀಯ ಲಾಭ ಪಡೆಯಲು ಯಾರೂ ಪ್ರಯತ್ನಿಸಬಾರದು. 
ಮಹಾರಾಷ್ಟ್ರದಲ್ಲಿಂದು ಏನೇ ಆದರೂ ಮಧ್ಯಂತರ ಚುನಾವಣೆ ನಡೆಯುತ್ತದೆ. ಅಮಿತ್ ಶಾ ಅವರು ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದಾರೆ. ರಾಷ್ಟ್ರಪತಿಗಳೂ ಕೂಡ ಆಯ್ಕೆಯಾಗಬಹುದು. ಎಲ್ಲಾ ಚುನಾವಣೆಗಳಲ್ಲೂ ನೀವು ಗೆಲವು ಸಾಧಿಸಬಹುದು. ಆದರೆ, ಕಾಶ್ಮೀರವನ್ನು ರಕ್ಷಣೆ ಮಾಡಲು ನಿಮ್ಮಿಂದ ಸಾಧ್ಯವೇ ಎಂದು ಸೇನೆ ಹೇಳಿಕೊಂಡಿದೆ. 
SCROLL FOR NEXT