ದೇಶ

ಕಾಶ್ಮೀರದಲ್ಲಿ ಪುನರಾರಂಭಗೊಂಡ ಮೊಬೈಲ್ ಇಂಟರ್ ನೆಟ್ ಸೇವೆ

Vishwanath S
ನವದೆಹಲಿ: ಕಾಶ್ಮೀರದಲ್ಲಿ ಹಿಂಸಾಚಾರ ಹಿನ್ನೆಲೆ ಕಳೆದ ಏಳು ದಿನಗಳಿಂದ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಪುನರಾರಂಭಗೊಂಡಿವೆ. 
ಇಂದು ಸಂಜೆಯಿಂದ ಕಾಶ್ಮೀರದಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಪುನರಾರಂಭಿಸಲಾಗಿದೆ. ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜರ್ ಅಹಮ್ಮದ್ ಭಟ್ ಮತ್ತು ಆತನ ಸಹಚರ ಫೈಜಾನ್ ಅಹಮ್ಮದ್ ನನ್ನು ಭದ್ರತಾ ಸಿಬ್ಬಂದಿಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು. ಈ ಸಂಬಂಧ ವಂದತಿಗಳು ಹರಡುವುದನ್ನು ತಡೆಯಲು ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. 
ಏಪ್ರಿಲ್ 17ರಿಂದ ಭಾರತ ಸರ್ಕಾರ ಕಾಶ್ಮೀರದಲ್ಲಿ ವಾಟ್ಸಾಪ್, ಫೇಸ್ ಬುಕ್ ಮತ್ತು ಟ್ವೀಟರ್ ಸೇರಿದಂತೆ 22 ವೆಬ್ ಸೈಟ್ ಮತ್ತು ಅಪ್ಲಿಕೇಷನ್ ಗಳನ್ನು ನಿರ್ಬಂಧಿಸಿತ್ತು.
SCROLL FOR NEXT