ದೇಶ

ವಿದೇಶಕ್ಕೆ ತೆರಳುವ ಭಾರತೀಯರಿಗೆ ಡಿಪಾರ್ಚರ್ ಕಾರ್ಡ್ ಗಳಿಂದ ವಿನಾಯಿತಿ

Srinivas Rao BV
ಬೆಂಗಳೂರು: ವಿದೇಶಕ್ಕೆ ತೆರಳುವ ಭಾರತೀಯರಿಗೆ ಡಿಪಾರ್ಚರ್ ಕಾರ್ಡ್ ತುಂಬುವುದರಿಂದ ವಿನಾಯಿತಿ ನೀಡಲಾಗಿದೆ. ಜು.1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ಡಿಪಾರ್ಚರ್ ಕಾರ್ಡ್ ಗಳನ್ನು ತುಂಬಿಸುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗುತ್ತದೆ. 
ವಿದೇಶಾಂಗ ಇಲಾಖೆಯಿಂದ ಈ ಬಗ್ಗೆ ಅಧಿಸೂಚನೆ ಹೊರಬಿದ್ದಿದ್ದು, ದೇಶಾದ್ಯಂತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ಡಿಪಾರ್ಚರ್ ಕಾರ್ಡ್ ನ ಪದ್ಧತಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ. ವಿಮಾನ ನಿಲ್ದಾಣಗಳಲ್ಲಿ ಮಾತ್ರ ಈ ವಿನಾಯಿತಿ ನೀಡಲಾಗಿದ್ದು, ರೈಲು, ಬಂದರು ಮತ್ತು ಭೂ ವಲಸೆ ಚೆಕ್ ಪೋಸ್ಟ್ ಗಳಲ್ಲಿ ಡಿಪಾರ್ಚರ್ ಕಾರ್ಡ್ ನ್ನು ತುಂಬಿಸುವುದು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. 
SCROLL FOR NEXT