ಜಮ್ಮು ಕಾಶ್ಮೀರ ಹೊರತುಪಡಿಸಿ, ಎಲ್ಲ ರಾಜ್ಯಗಳಲ್ಲೂ ಎಸ್ ಜಿ ಎಸ್ ಟಿ ಕಾಯ್ದೆ ಅಂಗೀಕಾರ
ಸ್ಟೇಟ್ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ (ಎಸ್ ಜಿ ಎಸ್ ಟಿ) ಕಾಯ್ದೆಯನ್ನು ಕೇರಳ ಬುಧವಾರ ಅಂಗೀಕರಿಸಿದ್ದು, ಜುಲೈ ೧ರಿಂದ ಜಾರಿಗೆ ಬರಲಿರುವ ಭಾರತೀಯ ತೆರಿಗೆ ಕಾಯ್ದೆಯನ್ನು ಜಮ್ಮು ಮತ್ತು
ನವದೆಹಲಿ: ಸ್ಟೇಟ್ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ (ಎಸ್ ಜಿ ಎಸ್ ಟಿ) ಕಾಯ್ದೆಯನ್ನು ಕೇರಳ ಬುಧವಾರ ಅಂಗೀಕರಿಸಿದ್ದು, ಜುಲೈ ೧ರಿಂದ ಜಾರಿಗೆ ಬರಲಿರುವ ಭಾರತೀಯ ತೆರಿಗೆ ಕಾಯ್ದೆಯನ್ನು ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂಗೀಕಾರ ಮಾಡಿವೆ.
"ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಸ್ ಜಿ ಎಸ್ ಟಿ ಕಾಯ್ದೆಯನ್ನು ಅಂಗೀಕರಿಸಿವೆ ಮತ್ತು ಈಗ ಜುಲೈ ೧ ರಂದು ಅದನ್ನು ಸರಾಗವಾಗಿ ಜಾರಿಗೊಳಿಸಲು ಸಿದ್ಧವಾಗಿವೆ" ಎಂದು ವಿತ್ತ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯ ಎಸ್ ಜಿ ಎಸ್ ಟಿ ಕಾಯ್ದೆಯನ್ನು ಅಂಗೀಕರಿಸಲು ಕೇರಳ ಬುಧವಾರ ಗೊತ್ತುವಳಿ ಸೂಚಿಸಿದ್ದು, ಜೂನ್ ೧೫ ರಂದು ಪಶ್ಚಿಮ ಬಂಗಾಳ ಕೂಡ ಇದಕ್ಕೆ ಅನ್ವಯವಾಗುವ ಗೊತ್ತುವಳಿ ಹೊರಡಿಸಿತ್ತು.
"ಆದುದರಿಂದ, ಬಹುತೇಕ ಇಡೀ ದೇಶ, ೩೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ, ಈಗ ಜಿ ಎಸ್ ಟಿ ಕಾಯ್ದೆ ಜಾರಿ ಮಾಡಲು ಮುಂದಾಗಿವೆ" ಎಂದು ಸಚಿವಾಲಯ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.