ದೇಶ

ಜಿಎಸ್ ಟಿ ಪರಿಣಾಮ: ರೈಲಿನ ಎಸಿ, ಪ್ರಥಮ ದರ್ಜೆ ಬೋಗಿಗಳ ಪ್ರಯಾಣ ದರ ಹೆಚ್ಚಳ

Sumana Upadhyaya
ನವದೆಹಲಿ: ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬರಲಿದ್ದು, ಎಸಿ ಮತ್ತು ಪ್ರಥಮ ದರ್ಜೆ ಬೋಗಿಗಳಲ್ಲಿ ಪ್ರಯಾಣ ದರ ಏರಿಕೆಯಾಗಲಿದೆ.ಟಿಕೆಟ್ ಮೇಲೆ ಸೇವಾ ಶುಲ್ಕ ಜಿಎಸ್ ಟಿ ಜಾರಿಯಾದರೆ ಶೇಕಡಾ 4.5ರಿಂದ ಶೇಕಡಾ 5ಕ್ಕೆ ಹೆಚ್ಚಾಗಲಿದೆ.
ಸೇವಾ ಶುಲ್ಕ ರೈಲುಗಳಲ್ಲಿ ಎಸಿ ಮತ್ತು ಪ್ರಥಮ ದರ್ಜೆ ರೈಲುಗಳ ಪ್ರಯಾಣ ದರದ ಮೇಲೆ ಮಾತ್ರ ಹಾಕಲಾಗುತ್ತದೆ. ಉದಾಹರಣೆಗೆ ಟಿಕೆಟ್ ಬೆಲೆ 2,000 ರೂಪಾಯಿಗಳಿದ್ದರೆ ಮುಂದಿನ ತಿಂಗಳಿನಿಂದ ಪ್ರಯಾಣಿಕರು 2,100 ರೂಪಾಯಿ ನೀಡಬೇಕು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 1ರಂದು ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿಗೆ ರೈಲ್ವೆ ಇಲಾಖೆ ಸಿದ್ಧವಾಗುತ್ತಿದ್ದು, ಪ್ರತಿ ರಾಜ್ಯದಲ್ಲಿ ಇಲಾಖೆಯ ಸುಗಮ ಕಾರ್ಯನಿರ್ವಹಣೆಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
ಭಾರತೀಯ ರೈಲ್ವೆಯಲ್ಲಿ ಜಿಎಸ್ ಟಿಯ ಪರಿಣಾಮಕಾರಿ ಜಾರಿಗೆ ಸಲಹೆಗಾರರನ್ನು ನೇಮಿಸಲಾಗಿದೆ. ಪಾನ್ ವಿವರಗಳನ್ನು ಆಧರಿಸಿ ಜಿಎಸ್ ಟಿ ದಾಖಲಾತಿಯಾಗಲಿದ್ದು ರೈಲ್ವೆ ಇಲಾಖೆಗೆ ಈಗಾಗಲೇ ಪಾನ್ ಸಂಖ್ಯೆ ಸಿಕ್ಕಿದೆ.
ಜಿಎಸ್ಟಿ ಅನುಸರಣೆಯನ್ನು ನೋಡಿಕೊಳ್ಳಲು ಪ್ರತಿ ವಲಯದ ಪ್ರಧಾನ ವ್ಯವಸ್ಥಾಪಕರನ್ನು ಮುಖ್ಯ ಅಧಿಕಾರಿಯಾಗಿ ನೇಮಿಸಲಾಗಿದೆ.
ಭಾರತೀಯ ರೈಲ್ವೆಯ ಮಾಹಿತಿ ತಂತ್ರಜ್ಞಾನ ವಿಭಾಗ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ ಸರಕು ಮತ್ತು ಪ್ರಯಾಣಿಕರ ಸಂಚಾರಕ್ಕೆ ಸೂಕ್ತ ಸಾಫ್ಟ್ವೇರ್ ಮಾರ್ಪಾಡು ಮಾಡಲು ನೋಡಿದೆ.
ರೈಲ್ವೆಯ ಹಚ್ಚಿನ ವಹಿವಾಟುಗಳು ಕಂಪ್ಯೂಟರೀಕರಣಗೊಂಡಿದ್ದು ಇನ್ನು ಕೆಲವು ಆಫ್ ಲೈನ್ ನಲ್ಲಿದೆ. ಅವುಗಳನ್ನು ಕೂಡ ಡಿಜಿಟಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
SCROLL FOR NEXT