ಸಾಂದರ್ಭಿಕ ಚಿತ್ರ 
ದೇಶ

30 ನ್ಯಾನೊ ಉಪಗ್ರಹಗಳೊಂದಿಗೆ ಕಾರ್ಟೊಸಾಟ್ -2 ಉಡಾವಣೆಗೆ ಕ್ಷಣಗಣನೆ ಆರಂಭ

30 ಸಹ ಪ್ರಯಾಣಿಕ ಉಪಗ್ರಹಗಳೊಂದಿಗೆ ಪೋಲಾರ್ ಉಪಗ್ರಹ ಉಡಾವಣಾ ವಾಹನ ಬಳಸಿಕೊಂಡು ಭೂಮಿಯ...

ನವದೆಹಲಿ: 30 ಸಹ ಪ್ರಯಾಣಿಕ ಉಪಗ್ರಹಗಳೊಂದಿಗೆ ಪೋಲಾರ್ ಉಪಗ್ರಹ ಉಡಾವಣಾ ವಾಹನ ಬಳಸಿಕೊಂಡು ಭೂಮಿಯ ವೀಕ್ಷಣೆ ಉಪಗ್ರಹ ಕಾರ್ಟೊಸಾಟ್ -2 ಸರಣಿ ಉಪಗ್ರಹಗಳ ಉಡಾವಣೆ ಕಾರ್ಯ ನಾಳೆ ಶ್ರೀಹರಿಕೋಟಾದಿಂದ ನಡೆಯಲಿದ್ದು ಅದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕ್ಷಣಗಣನೆ ಆರಂಭಿಸಿದೆ.
ಇಸ್ರೊ ಮೂಲಗಳ ಪ್ರಕಾರ, ಪಿಎಸ್ಎಲ್ ವಿ ರಾಕೆಟ್ ಗಳ ಎಕ್ಸ್ಎಲ್, 712 ಕೆಜಿ ತೂಕದ ಕಾರ್ಟೊಸ್ಯಾಟ್-2 ಸರಣಿ ಉಪಗ್ರಹಗಳನ್ನು ಮತ್ತು 30 ಸಹ ಪ್ರಯಾಣಿಕ ಸ್ಯಾಟಲೈಟ್ ಗಳನ್ನು ಒಟ್ಟಾಗಿ ಸುಮಾರು 243 ಕೆಜಿ ತೂಕದ ಉಪಗ್ರಹವನ್ನು ಹೊತ್ತೊಯ್ಯಲಿದೆ. ನಾಳೆ ಬೆಳಗ್ಗೆ 9.29ರ ಸುಮಾರಿಗೆ ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಶ್ರೀ ಹರಿಕೋಟಾದಿಂದ ಉಡಾವಣೆಗೊಳ್ಳಲಿದೆ.
31 ಉಪಗ್ರಹಗಳು (29 ವಿದೇಶಿ ಮತ್ತು ಒಂದು ಭಾರತೀಯ) ಸ್ಯಾಟಲೈಟ್ ಗಳು ನಾಳೆ ಉಡಾವಣೆಗೊಳ್ಳಲಿವೆ. ಅವುಗಳಲ್ಲಿ 30 ಉಪಗ್ರಹಗಳು ಒಟ್ಟಾಗಿ 243 ಕೆಜಿ ತೂಕವನ್ನು ಹೊಂದಿದ್ದರೆ, ಕಾರ್ಟೊಸ್ಯಾಟ್ ಸೇರಿದಂತೆ 31 ಉಪಗ್ರಹಗಳ ತೂಕ ಸುಮಾರು 955 ಕೆಜಿ ಇರಲಿದೆ.ರಾಕೆಟ್ 505 ಕಿಲೋ ಮೀಟರ್ ಧ್ರುವ ಸೂರ್ಯ ಸಿಂಕ್ರೊನಸ್ ಕಕ್ಷೆ (ಎಸ್ಎಸ್ಒ)ಗೆ ಉಪಗ್ರಹಗಳನ್ನು ಜೋಡಿಸಲಿದೆ. 
ಸಹ ಪ್ರಯಾಣಿಕ ಸ್ಯಾಟಲೈಟ್ ಗಳೆಂದರೆ 29 ನ್ಯಾನೊ ಸ್ಯಾಟಲೈಟ್ ಗಳು ಸೇರಿವೆ. 14 ದೇಶಗಳಾದ ಆಸ್ಟ್ರಿಯಾ, ಬೆಲ್ಜಿಯಂ, ಬ್ರಿಟನ್, ಚಿಲೆ, ಝೆಕ್ ರಿಪಬ್ಲಿಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟೆಲಿ, ಜಪಾನ್, ಲಟ್ವಿಯಾ, ಲಿಟುವೇನಿಯಾ, ಸ್ಲೊವಾಕಿಯಾ, ಅಮೆರಿಕಾ ಮತ್ತು ಭಾರತೀಯ ನ್ಯಾನೊ ಸ್ಯಾಟಲೈಟ್ ಗಳನ್ನು ಹೊಂದಿದೆ.
ಭಾರತೀಯ ನ್ಯಾನೊ ಸ್ಯಾಟಲೈಟ್ 15 ಕೆಜಿ ನಿಯುಸ್ಯಾಟ್ ಆಗಿದ್ದು ತಮಿಳು ನಾಡಿನ ನೂರಲ್ ಇಸ್ಲಾಂ ವಿಶ್ವವಿದ್ಯಾಲಯಕ್ಕೆ ಸೇರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್