ಅಂತೂ ಜಮ್ಮು ಕಾಶ್ಮೀರ ಪೊಲೀಸರ ರಕ್ಷಣೆಗೆ ಬಂತು ಬುಲೆಟ್ ಪ್ರೂಫ್ ವಾಹನ!
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಐದು ಮಂದಿ ಪೇದೆಗಳನ್ನು ಭಯೋತ್ಪಾದಕರು ಹತ್ಯೆಗೈದ ಬಳಿಕ ಎಚ್ಚೆತ್ತುಕೊಂಡ ಮುಖ್ಯಮಂತ್ರಿ...
ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಐದು ಮಂದಿ ಪೇದೆಗಳನ್ನು ಭಯೋತ್ಪಾದಕರು ಹತ್ಯೆಗೈದ ಬಳಿಕ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಮೆಹಬೂಬು ಮುಫ್ತಿ ಪೊಲೀಸರಿಗೆ ಗುಂಡು ನಿರೋಧಕ ವಾಹನಗಳನ್ನು ಒದಗಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಸ್ಟೇಶನ್ ಹೌಸ್ ಆಫೀಸರ್ ಗಳಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಬುಲೆಟ್ ಪ್ರೂಫ್ ವಾಹನಗಳನ್ನು ಒದಗಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ದಕ್ಷಿಣ ಕಾಶ್ಮೀರದ ಅಚಾಬಾಲ್ ಪ್ರದೇಶದಲ್ಲಿ ಕಳೆದ ವಾರ ಎಸ್ ಎಚ್ ಓ ಫಿರೋಜ್ ಅಹ್ಮದ್ ಸೇರಿದಂತೆ 6 ಮಂದಿ ಪೊಲೀಸರನ್ನು ಉಗ್ರರು ಹತ್ಯೆಗೈದಿದ್ದರು. ಈ ಘಟನೆ ಬಳಿಕ ಮುಫ್ತಿ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದವು.