ಗ್ರೇಟರ್ ನೊಯ್ಡಾ: ಲೈಂಗಿಕ ಕಾರ್ಯಕರ್ತೆಯನ್ನು ಅಪಹರಿಸಿ ಚಲಿಸುವ ಕಾರಿನಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ಥೆಯ ದೂರಿನ ಪ್ರಕಾರ, ಅಶ್ರು ಎಂಬ ವ್ಯಕ್ತಿ ತನ್ನನ್ನು ಅಪಹರಿಸಿ ಬಳಿಕ ಜೂನ್ 19ರಂದು ಅಫ್ರಿದಿ ಎಂಬುವವರಿಗೆ ಮಾರಾಟ ಮಾಡಿದ ನಂತರ ಕಿಶನ್, ನರೇಶ್ ಹಾಗೂ ರಾಹುಲ್ ಮೂವರು ತನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಚಲಿಸುವ ಕಾರಿನಲ್ಲೇ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ.
ಮಹಿಳೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಚಲಿಸುವ ಕಾರಿನಲ್ಲೇ ಅತ್ಯಾಚಾರ ಎಸಗಿ ಬಳಿಕ ರಸ್ತೆ ಬದಿ ಬಿಸಾಕಿ ಹೋಗಿದ್ದಾರೆ ಎಂದು ಎಸ್ಎಸ್ ಪಿ ಲೊವೆ ಕುಮಾರ್ ಅವರು ತಿಳಿಸಿದ್ದಾರೆ.
ಅಶ್ರು ಮಾನವ ಕಳ್ಳ ಸಾಗಾಣೆಯಲ್ಲಿ ಭಾಗಿಯಾಗಿದ್ದು, ಇತರೆ ಆರೋಪಿಗಳಾದ ನರೇಶ್ ಮತು ರಾಹುಲ್ ಸಾರಿಗೆ ಕಂಪನಿ ನಡೆಸುತ್ತಿದ್ದು, ಅಫ್ರಿದಿ ಒಬ್ಬ ಆಟೋ ಚಾಲಕನಾಗಿದ್ದಾನೆ. ಐದನೇ ಆರೋಪಿ ಕಿಶನ್ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಸದಸ್ಯ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳಾದ ಅಶ್ರು, ಅಫ್ರಿದಿ, ನರೇಶ್ ಹಾಗೂ ರಾಹುಲ್ ನನ್ನು ಬಂಧಿಸಲಾಗಿದೆ ಎಂದು ಎಸ್ಎಸ್ ಪಿ ಹೇಳಿದ್ದಾರೆ. ಅಲ್ಲದೆ ಕಿಶನ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics