ನವದೆಹಲಿ: ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಾಲ್ವರು ಭಾರತೀಯ ಕೈದಿಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.
ಸೂರತ್ ರಾಮ್, ಸೋಹನ್ ಲಾಲ್, ಮೊಹಮ್ಮದ್ ಮಕ್ಬೂಲ್ ಲೋನೆ ಮತ್ತು ಅಬ್ದುಲ್ ಮಜೀದ್ ಬಿಡುಗಡೆಯಾಗಿರುವ ನಾಲ್ವರು ಭಾರತೀಯಲಾಗಿದ್ದಾರೆಂದು ತಿಳಿದುಬಂದಿದೆ.
ವಾಘಾ ಗಡಿ ಮೂಲಕ ನಾಲ್ವರು ಭಾರತೀಯರನ್ನು ಪಾಕಿಸ್ತಾನದ ಭಾರತಕ್ಕೆ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.