ನವದೆಹಲಿ: ನೋಟು ನಿಷೇಧ, ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಬೆಂಬಲಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಾಗಲಿದ್ದಾರಾ ಎಂಬ ಕುತೂಹಲ ಮೂಡಿತ್ತು.
ಈಗ ನಿತೀಶ್ ಕುಮಾರ್ ಎನ್ ಡಿಎ ಸೇರ್ಪಡೆಗೊಳ್ಳುವ ಸಾಧ್ಯತೆಯ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಯಲ್ಲಿ ಅಹಿತಕರ ವಾತಾವರಣಾ ಎದುರಿಸುತ್ತಿದ್ದು, ಎನ್ ಡಿಎ ಸೇರಿದರೆ ನಿತೀಶ್ ಕುಮಾರ್ ಅವರನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಹಾಗೂ ಲೋಕ್ ಜನಶಕ್ತಿ (ಎಲ್ ಜೆಪಿ) ಹೇಳಿದೆ.
"ನಿತೀಶ್ ಕುಮಾರ್ ಎನ್ ಡಿಎ ಸೇರಿದರೆ ಅವರನ್ನು ಸ್ವಾಗತಿಸಿ ಮತ್ತೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ" ಎಂದು ಬಿಜೆಪಿ ಹಿರಿಯ ನಾಯಕ ವಿನೋದ್ ನಾರಾಯಣ್ ಝಾ ಹೇಳಿದ್ದಾರೆ. ಕೇಂದ್ರ ಸಚಿವ ಹಾಗೂ ಎಲ್ ಜೆ ಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಕೂಡ ನಿತೀಶ್ ಕುಮಾರ್ ಎನ್ ಡಿಎ ಗೆ ಸೇರ್ಪಡೆಗೊಂಡರೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಆದರೆ ಜೆಡಿಯು ನಾಯಕ ಶ್ಯಾಮ್ ರಜಾಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜೆಡಿಯು ಮಹಾಮೈತ್ರಿಯ ಭಾಗವಾಗಿದ್ದು, ಎನ್ ಡಿಎ ಸೇರುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics