ಮುಂಬೈ: ಮಹಿಳಾ ಕೈದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಇಂದ್ರಾಣಿ ಮುಖರ್ಜಿ ಸೇರಿದಂತೆ 200 ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಉದ್ಯಮಿಯಾಗಿರುವ ಇಂದ್ರಾಣಿ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿದ್ದು, ಮುಂಬೈ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಹಿಳಾ ಕೈದಿಯಾಗಿದ್ದ ಮಂಜು ಗೋವಿಂದ್ ಶೆಟ್ಟ ಎಂಬುವವರು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೃತ ಪಟ್ಟಿದ್ದರು. ಪ್ರಕರಣ ಸಂಬಂಧ 6 ಜೈಲು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು.
ಶೆಟ್ಟೆಯವರ ಸಾವಿಗೆ ಜೈಲಿನಲ್ಲಿರುವ ಇಂದ್ರಾಣಿ ಸೇರಿದಂದೆ ಉಳಿದ ಕೈದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಕೆಲ ಮಹಿಳಾ ಕೈದಿಗಳು ಆರೋಪ ವ್ಯಕ್ತಪಡಿಸಿದ್ದು, ಮಂಜು ಶೆಟ್ಚೆಯಯವರನ್ನು ಅಧಿಕಾರಿಗಳು ಹೊಡೆದಿದ್ದರು. ಅಧಿಕಾರಿಗಳ ಏಟಿನಿಂದಲೇ ಶೆಟ್ಟ ಸಾವನ್ನಪ್ಪಿದ್ದಾರೆಂದು ಹೇಳಿಕೊಂಡಿದ್ದಾರೆ.
ಕೆಲ ಕೈದಿಗಳು ಜೈಲಿನ ಮೇಲ್ಚಾವಣಿ ಹತ್ತಿದ್ದು, ದಿನ ಪತ್ರಿಕೆಗಳನ್ನು ಸುಟ್ಟುಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಇಂದ್ರಾಣಿ ಸೇರಿದಂತೆ 200 ಕೈದಿಗಳ ವಿರುದ್ಧ ಗಲಭೆಗೆ ಕುಮ್ಮಕ್ಕು, ಸಾರ್ವಜನಿಕ ಸೇವಕರ ಮೇಲೆ ಹಲ್ಲೆ, ಜೈಲಿನ ಆಸ್ತಿ ನಾಶ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಹಲವು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 24 2012ರಲ್ಲಿ ಶೀನಾ ಬೋರಾರನ್ನು ಹತ್ಯೆ ಮಾಡಲಾಗಿದ್ದು, ಕೊಲೆಯಾದ ಮೂರು ವರ್ಷಗಳ ಬಳಿಕ ಇಂದ್ರಾಣಿ ಮುಖರ್ಜಿಯವರನ್ನು ಬಂಧನಕ್ಕೊಳಪಡಿಸಲಾಗಿತ್ತು.