ನವದೆಹಲಿ: ಭೀಕರ ಬರ ಹಾಗೂ ಮಳೆ ಕೊರತೆಯಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರವಾಗಿ 795.54 ಕೋಟಿ ರುಪಾಯಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಉನ್ನತ ಸಮಿತಿ ರಾಷ್ಟ್ರೀಯ ಬರ ಪರಿಹಾರ ನಿಧಿಯಿಂದ ಕರ್ನಾಟಕಕ್ಕೆ 795.54 ಕೋಟಿ ರುಪಾಯಿ ಬಿಡುಗಡೆ ಮಾಡಲಿದೆ.
ಬರ ಪರಿಹಾರವಾಗಿ ರಾಜ್ಯ ಸರ್ಕಾರ ಈ ಹಿಂದೆ ಕೇಂದ್ರ ಸರ್ಕಾರಕ್ಕೆ 4,702 ಕೋಟಿ ರುಪಾಯಿ ಬೇಡಿಕೆ ಇಟ್ಟಿತ್ತು. ಆಗ ಕೇಂದ್ರ ಸರ್ಕಾರ 1782.44 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು ಇದೀಗ 795.54 ಕೋಟಿ ಬಿಡುಗಡೆ ಮಾಡಿದ್ದು ಒಟ್ಟಾರೆ 2577.98 ಕೋಟಿ ಬಿಡುಗಡೆ ಮಾಡಿದೆ.