ನವದೆಹಲಿ: ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಎಸ್ ಟಿ) ಜಾರಿಗಾಗಿ ಕೇಂದ್ರ ಸರ್ಕಾರ ಜೂನ್ 30ರಂದು ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನ ಬಹಿಷ್ಕರಿಸಲು ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ನಿರ್ಧರಿಸಿದೆ.
ಜಿಎಸ್ ಟಿ ಜಾರಿ ಸಂಬಂಧ ಕರೆಯಲಾಗಿರುವ ಮಧ್ಯರಾತ್ರಿ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸುವುದಿಲ್ಲ ಎಂದು ಪಕ್ಷದ ಹಿರಿಯ ವಕ್ತಾರ ಸತ್ಯವೃತ್ ಚತುರ್ವೇದಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ನಾಯಕು ಈ ಸಂಬಂಧ ಇಂದು ಸಭೆ ನಡೆಸಿ, ವಿಶೇಷ ಅಧಿವೇಶನ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾಂಗ್ರೆಸ್ ನಿರ್ಧಾರವನ್ನು ಡಿಎಂಕೆ ಸೇರಿದಂತೆ ಯುಪಿಎನ ಹಲವು ಮಿತ್ರ ಪಕ್ಷಗಳು ಬೆಂಬಲಿಸಿದ್ದು, ಜಿಎಸ್ ಟಿ ಅಧಿವೇಶನವನ್ನು ಬರಿಷ್ಕರಿಸುವ ಸಾಧ್ಯತೆ.
ಇನ್ನು ತೃಣಮೂಲ ಕಾಂಗ್ರೆಸ್ ಈಗಾಗಲೇ ಜಿಎಸ್ ಟಿ ವಿಶೇಷ ಅಧಿವೇಶನ ಬಹಿಷ್ಕರಿಸುವುದಾಗಿ ಘೋಷಿಸಿದೆ.
ಮಧ್ಯರಾತ್ರಿ ಅಧಿವೇಶನದ ವೇಳೆ, ಈಗಾಗಲೇ ಸದನದ ಸಮ್ಮತಿ ಪಡೆದಿರುವ ಜಿಎಸ್ ಟಿ ಮಸೂದೆಯನ್ನು ಔಪಚಾರಿಕವಾಗಿ ಮತ್ತೊಮ್ಮೆ ಮಂಡಿಸಿ, ಚರ್ಚಿಸಿ, ಬಳಿಕ ಸದನದ ಅನುಮೋದನೆ ಪಡೆಯಲಾಗುತ್ತಿದೆ.
ಮಧ್ಯರಾತ್ರಿ ಕರೆಯಲಾಗಿರುವ ಅಧಿವೇಶನವು ಜಂಟಿ ಅಧಿವೇಶನವಾಗಿದ್ದು, ಲೋಕಸಭೆ ಹಾಗೂ ರಾಜ್ಯ ಸಭೆಗಳ ಸದಸ್ಯರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics