ಕೆ.ಎಸ್ ಶಬರಿನಾಥನ್ ಮತ್ತು ದಿವ್ಯಾ ಎಸ್ ಅಯ್ಯರ್
ತಿರುವನಂತಪುರ: ಕಾಂಗ್ರೆಸ್ ಶಾಸಕ ಕೆ ಎಸ್ ಶಬರೀನಾಥನ್ ಅವರಿಂದು ಐಎಎಸ್ ಅಧಿಕಾರಿ ದಿವ್ಯಾ ಎಸ್ ಅಯ್ಯರ್ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ತಮಿಳು ನಾಡಿನ ಕನ್ಯಾಕುಮಾರಿ ಜಿಲ್ಲೆಯ ತುಕಲಾಯ್ ಎಂಬಲ್ಲಿನ ದೇವಸ್ಥಾನದಲ್ಲಿ ನಡೆದ ವಿವಾಹದಲ್ಲಿ ಕೇವಲ ಸಂಬಂಧಿಕರು ಮಾತ್ರ ಆಪ್ತೇಷ್ಟರು ಮಾತ್ರ ಭಾಗವಹಿಸಿದ್ದರು.
ಶಾಸಕ, ಶಬರೀನಾಥನ್ ಇಂಜಿನಿಯರಿಂಗ್ ಪದವೀಧರರು. ಸಬ್ ಕಲೆಕ್ಟರ್ ಆಗಿರುವ ವಧು, ದಿವ್ಯಾ ಅವರು ವೈದ್ಯಕೀಯ ಪದವೀಧರೆ. ರಾಜಕಾರಣಿ ಮತ್ತು ಸರಕಾರಿ ಅಧಿಕಾರಿಣಿ.
ಅರುವಿಕ್ಕರ ಕ್ಷೇತ್ರ ಪ್ರತಿನಿಧಿಸುತ್ತಿರುವ 33ರ ವರ್ಷದ ಶಾಸಕ ಶಬರೀನಾಥನ್ ಅವರು ಕಳೆದ ತಿಂಗಳು ತಮ್ಮ ಫೇಸ್ ಬುಕ್‌ನಲ್ಲಿ ತಾನು ಮದುವೆಯಾಗಲಿರುವ ವಿಷಯವನ್ನು ಪ್ರಕಟಿಸಿದ್ದರು.
ದಿವಂಗತ ಕಾಂಗ್ರೆಸ್ ನಾಯಕ ಹಾಗೂ ಅಸೆಂಬ್ಲಿ ಸ್ಪೀಕರ್ ಆಗಿದ್ದ ಜಿ ಕಾರ್ತಿಕೇಯನ್ ಅವರ ಪುತ್ರನಾಗಿರುವ ಶಬರೀನಾಥನ್ ಮುಂಬಯಿಯಲ್ಲಿ ಟಾಟಾ ಸನ್ಸ್ ಕಂಪೆನಿಯಲ್ಲಿ 7 ವರ್ಷಕೆಲಸ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics