ದೇಶ

ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟ ಹೊಂದಲು ಕಳಪೆ ಎಂಜಿನ್ ಕಾರಣ: ವಿಜಯ್ ಮಲ್ಯ

Sumana Upadhyaya
ನವದೆಹಲಿ: ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟದತ್ತ ಸಾಗಲು ಪ್ರ್ಯಾಟ್ ಮತ್ತು ವ್ಹಿತ್ನೆಯ್ ಕಂಪೆನಿ ಕಳಪೆ ಗುಣಮಟ್ಟದ ಎಂಜಿನ್ ಗಳನ್ನು ಪೂರೈಸಿದ್ದೇ ಕಾರಣ ಎಂದು ಆರೋಪಿಸಿರುವ ಮದ್ಯದ ದೊರೆ ವಿಜಯ್ ಮಲ್ಯ, ನಾಗರಿಕ ವಿಮಾನಯಾನದ ಮಹಾ ನಿರ್ದೇಶಕರು(ಡಿಜಿಸಿಎ) ಕಂಪೆನಿ ವಿರುದ್ಧ ತನಿಖೆ ಆರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರ್ಯಾಟ್ ಮತ್ತು ವ್ಹಿತ್ನೆಯ್ ಕಂಪೆನಿ ವಿರುದ್ಧ ತನಿಖೆ ಆರಂಭಿಸಿರುವುದು ಅಚ್ಚರಿಯನ್ನುಂಟುಮಾಡುವುದಿಲ್ಲ. ಕಿಂಗ್ ಫಿಶರ್ ಏರ್ ಲೈನ್ಸ್ ಗಳಿಕೆಯಲ್ಲಿ ನಷ್ಟ ಹೊಂದಲು ಅದರ ಕಳಪೆ ಎಂಜಿನ್ ಗಳು ಕಾರಣ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.
ಮುಂಬೈನಲ್ಲಿ ಇಂಡಿಗೊ ಪ್ರಯಾಣಿಕರ ವಿಮಾನದ ಎಂಜಿನ್ ಬೆಂಕಿ ಹತ್ತಿಕೊಂಡ ಘಟನೆಗೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ತನಿಖೆ ಕೈಗೊಂಡ ಹಿನ್ನೆಲೆಯಲ್ಲಿ ಮಲ್ಯ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. 
ಮಲ್ಯ ಮತ್ತೊಂದು ಟ್ವೀಟ್ ನಲ್ಲಿ, ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಕಳಪೆ ಗುಣಮಟ್ಟದ ಎಂಜಿನ್ ಪೂರೈಸಿದ ಪ್ರ್ಯಾಟ್ ಮತ್ತು ವ್ಹಿತ್ನೆಯ್ ಕಂಪೆನಿಯ ಇಂಟರ್ ನ್ಯಾಷನಲ್ ಏರೊ ಎಂಜಿನ್ಸ್ ಗೆ ಪರಿಹಾರ ನೀಡುವಂತೆ ನಾವು ಕೇಸು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ವಿಜಯ್ ಮಲ್ಯ 2013ರಲ್ಲಿ ಇಂಟರ್ ನ್ಯಾಷನಲ್ ಏರೊ ಎಂಜಿನ್ಸ್ ವಿರುದ್ಧ ಮೊಕದ್ದಮೆ ಹೂಡಿ ಕಳಪೆ ಗುಣಮಟ್ಟದ ಎಂಜಿನ್ ಪೂರೈಕೆ ಮಾಡಿದ್ದಕ್ಕಾಗಿ 236 ದಶಲಕ್ಷ ಡಾಲರ್ ಪರಿಹಾರ ಕೋರಿದ್ದರು. 
ಪ್ರ್ಯಾಟ್ ಮತ್ತು ವ್ಹಿತ್ನೆಯ್ ಕಂಪೆನಿಯ ಎಂಜಿನ್ ಗಳನ್ನು ಹೊಂದಿದ ತಾಂತ್ರಿಕ ದೋಷಗಳನ್ನು ಎದುರಿಸುತ್ತಿರುವ ಇಂಡಿಗೊ ಮತ್ತು ಗೊ ಏರ್ ನ 21 ಏರ್ ಬಸ್, 320 ನಿಯೊ ವಿಮಾನಗಳ ಪರೀಕ್ಷೆ ನಡೆಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಫೆಬ್ರವರಿಯಲ್ಲಿ ಆದೇಶ ನೀಡಿದ್ದಾರೆ. 
SCROLL FOR NEXT