ಇಸ್ಲಾಮಾಬಾದ್: ಆಫ್ಘಾನಿಸ್ತಾನ ಗಡಿಯಲ್ಲಿರುವ ಮೂರು ಗಡಿ ಕೇಂದ್ರಗಳಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಪಾಕಿಸ್ತಾನದ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಸೇನೆಯ ಮಾಧ್ಯಮ ವಿಭಾಗದ ಸಾರ್ವಜನಿಕ ಸಂಪರ್ಕದ ಆಂತರಿಕ ಸೇವೆ ಹೇಳಿಕೆ ನೀಡಿ, ಗಡಿಯಲ್ಲಿ ಭಯೋತ್ಪಾದಕರು ಸೇನಾ ಪೋಸ್ಟ್ ನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ದಾಳಿಯಲ್ಲಿ 10ಕ್ಕೂ ಹೆಚ್ಚು ಮಂದಿ ಉಗ್ರಗಾಮಿಗಳು ಹತರಾಗಿದ್ದಾರೆ. ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಖಮಾರ್ ಜಾವೇದ್ ಬಜ್ವಾ ಈ ದಾಳಿಯನ್ನು ಖಂಡಿಸಿದ್ದಾರೆ.