ದೇಶ

ಭಾರತ ವಾರಕ್ಕೆ ಎರಡು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು: ರಕ್ಷಣಾ ತಜ್ಞರು

Sumana Upadhyaya
ನವದೆಹಲಿ: ಮೊನ್ನೆ ಶನಿವಾರ ದಕ್ಷಿಣ ಕಾಶ್ಮೀರದಲ್ಲಿ ನಡೆದ ಟ್ರಾಲ್ ಎನ್ ಕೌಂಟರ್ ನಂತರದ ಪರಿಣಾಮದ ಬಗ್ಗೆ ಮಾತನಾಡಿದ ರಕ್ಷಣಾ ತಜ್ಞ ನಿವೃತ್ತ ವಿಂಗ್ ಕಮಾಂಡರ್ ಪ್ರಫುಲ್ ಬಕ್ಷಿ, ದಾಳಿ ನಡೆದ ಸಂದರ್ಭದಲ್ಲಿ ಪ್ರತೀಕಾರ ತೀರಿಸದಿರುವುದು ತಪ್ಪು ನೀತಿ. ಭಾರತ ವಾರಕ್ಕೆ ಕನಿಷ್ಠ ಎರಡು ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ ಭಾಗ ಎಂದು ನಾವು ತೋರಿಸಬೇಕು. ಭಾರತ ವಾರಕ್ಕೆ ಕನಿಷ್ಠ ಎರಡು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು ಎಂದು ಹೇಳಿದರು.
ಸರಿಯಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ, ಆದರೆ ಅದರ ಅರ್ಥ ಅವರು ಭದ್ರತಾ ಅಧಿಕಾರಿಗಳನ್ನು ಹೆಚ್ಚಿಸುತ್ತಿದ್ದಾರೆ ಎಂದಲ್ಲ. ನಾವು ದಾಳಿ ಮಾಡುವುದಿಲ್ಲ ಎನ್ನುವುದು ತಪ್ಪು ನೀತಿ, ದಾಳಿ ಸಂಭವಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದರು.
ಮತ್ತೊಬ್ಬ ರಕ್ಷಣಾ ತಜ್ಞ ಮೇಜರ್ ಜನರಲ್ (ನಿವೃತ್ತ) ಪಿ.ಕೆ.ಸೆಹಗಲ್ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ. ಉಗ್ರಗಾಮಿಗಳಿಗೆ ಬೆಂಬಲ ನೀಡುವವರನ್ನು  ಶಿಕ್ಷಿಸಲಾಗುವುದು ಎಂದು ಬಿಪಿನ್ ರಾವತ್ ಹೇಳಿಕೆ ನೀಡಿದ್ದರು.
ದಕ್ಷಿಣ ಕಾಶ್ಮೀರದ ಟ್ರಾಲ್ ನಲ್ಲಿ ಮೊನ್ನೆ ಶನಿವಾರ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು, ಮೂವರು ಸೇನಾ ಸಿಬ್ಬಂದಿ ಮತ್ತು ಓರ್ವ ಪೊಲೀಸ್ ಹತರಾಗಿದ್ದರು.
SCROLL FOR NEXT