ಮುಂಬೈ: ಶಿವಸೇನೆಯ ಹಿರಿಯ ನಾಯಕ ಹಾಗೂ ಕಾಲೇಜ್ ಮಾಜಿ ಪ್ರಾಚಾರ್ಯ ವಿಶ್ವನಾಥ್ ಪಿ ಮಹಾದೇಶ್ವರ್ ಅವರು ಬುಧವಾರ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಶಿವಸೇನೆ ಸತತ ಐದನೇ ಬಾರಿಗೆ ಮೇಯರ್ ಪಟ್ಟಕೇರಿದಂತಾಗಿದೆ.
ಬಾಂದ್ರಾದಿಂದ ಮೂರು ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿರುವ 56 ವರ್ಷದ ಮಹಾದೇಶ್ವರ್ ಅವರು, ದೇಶದ ಅತ್ಯಂತ ದೊಡ ಹಾಗೂ ಶ್ರೀಮಂತ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಶಿವಸೇನೆ ಮಾಜಿ ಮಿತ್ರ ಪಕ್ಷ ಬಿಜೆಪಿ ಸಹ ವಿಶ್ವನಾಥ್ ಮಹಾದೇಶ್ವರ್ ಅವರಿಗೆ ಮತ ಹಾಕಿದರೆ, ಪ್ರತಿಪಕ್ಷ ಎಂಎನ್ಎಸ್ ಮತದಾನದಿಂದ ದೂರ ಉಳಿಯಿತು.