ಅಖಿಲೇಶ್ ಯಾದವ್ 
ದೇಶ

ಬಿಜೆಪಿಯಿಂದ ಪಂಕ್ಚರ್ ಆಯ್ತು ಅಖಿಲೇಶ್ ಸೈಕಲ್!

ಉತ್ತರ ಪ್ರದೇಶದ ಜನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರದ ಆಡಳಿತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮತ್ತೆ..

ಲಕ್ನೋ: ಉತ್ತರ ಪ್ರದೇಶದ ಜನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರದ ಆಡಳಿತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮತ್ತೆ ಗದ್ದುಗೆ ಏರಬೇಕೆಂಬ ಮಹಾದಾಸೆಯಿಂದ ಕಾಂಗ್ರೆಸ್ ಜೊತೆ ಮಾಡಿಕೊಂಡ ಮೈತ್ರಿ ಕೂಡ ಅಖಿಲೇಶ್ 'ಕೈ' ಹಿಡಿಯಲಿಲ್ಲ.

ಕೌಟುಂಬಿಕ ಕಲಹ ಹಾಗೂ ಪಕ್ಷದೊಳಗಿನ ಆಂತರಿಕ ಕಚ್ಚಾಟ ಮತ್ತು ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರಿಣಾಮಕಾರಿಯಾದ ಚುನಾವಣಾ ಪ್ರಚಾರ ಅಖಿಲೇಶ್ ಅವರ ಸೈಕಲ್ ಅನ್ನು ಜನ ತಿರಸ್ಕರಿಸುವಂತೆ ಮಾಡಿದೆ.

ಅಖಿಲೇಶ್ ಯಾದವ್ ಅವರ 'ಕಾಮ್ ಬೋಲ್ತಾ ಹೈ ' ಘೋಷಣೆ ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಜೊತೆಗಿನ ಸಮಾಜವಾದಿ ಪಕ್ಷದ ಮೈತ್ರಿ ಕೂಡ ಚರ್ಚೆಗೆ ಗ್ರಾಸವಾಗಿದೆ.

43 ವರ್ಷದ ಅಖಿಲೇಶ್ ಯಾದವ್ ತಮ್ಮ ಡೈನಾಮಿಕ್ ವರ್ಚಸ್ಸಿನಿಂದಾಗಿ 2012 ರಲ್ಲಿ 38 ನೇ ವಯಸ್ಸಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅತಿ ಕಿರಿಯ ವಯಸ್ಸಿನಲ್ಲಿಯೇ ಸಿಎಂ ಪಟ್ಟಕ್ಕೇರಿದ ಖ್ಯಾತಿಗೂ ಭಾಜನರಾದರು.

ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಜೊತೆಗಿನ ಸಂಘರ್ಷದಲ್ಲಿ  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡರು. ಜೊತೆಗೆ ವಿಧಾನ ಸಭೆ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ  ಉತ್ತರ ಪ್ರದೇಶದಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ರೈತರ ಕಲ್ಯಾಣ ಹಾಗೂ ಬಡ ಜನರ  ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದರು.

ಸಮಾಜವಾದಿ ಪಕ್ಷ ತೀರಾ ಸಂಕಷ್ಟದಲ್ಲಿದ್ದಾಗ ಪಕ್ಷವನ್ನು ಅಖಿಲೇಶ್ ಯಾದವ್ ಪಕ್ಷವನ್ನು ಸದೃಡಗೊಳಿಸಿದರು. 1973 ಜುಲೈ 1 ರಂದು ಇಟಾವಾ ಜಿಲ್ಲೆಯ ಸಾಯ್ ಪಾಯ್ ಗ್ರಾಮದಲ್ಲಿ ಅಖಿಲೇಶ್ ಜನಿಸಿದರು. ರಾಜಸ್ತಾನದ ಡೋಲ್ ಪುರ ಮಿಲಿಟರಿ ಶಾಲೆಯಲ್ಲಿ ತಮ್ಮ ವ್ಯಾಸಂಗ ಮುಗಿಸಿದ ಅಖಿಲೇಶ್ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ  ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದರು.

ಜೊತೆಗೆ ಸಿಡ್ನಿ ವಿಶ್ವ ವಿದ್ಯಾನಿಲಯದಲ್ಲಿ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ಅಖಿಲೇಶ್ ಎಂಜಿನೀಯರ್ , ರೈತ ಮತ್ತು ಸಮಾಜ ಸೇವಕ.

2012 ರ ಚುನಾವಣಾ ವೇಳೆ ಉತ್ತರ ಪ್ರದೇಶದಾದ್ಯಂತ ನಡೆಸಿದ್ದ ಸೈಕಲ್ ರ್ಯಾಲಿ ಬಹಳ ಪ್ರಖ್ಯಾತವಾಯಿತು. ಜೊತೆಗೆ ಎಲ್ಲಾ ಸಮುದಾಯದ ಯುವಕರನ್ನು ಸೆಳೆಯಲು ಕಾರಣವಾಯಿತು. ಸಂಸದರಾಗಿದ್ದ ಅಖಿಲೇಶ್ ತಮ್ಮ ಸ್ಥಾಮನಕ್ಕೆ ರಾಜಿನಾಮೆ ನೀಡಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡು ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

2016 ರಲ್ಲಿ ಉಂಟಾದ ಕೌಟುಂಬಿಕ ಕಲಹದಿಂದ  ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತು ಅಖಿಲೇಶ್ ನಡುವಿನ ಜಗಳ ಬೀದಿಗೆ ಬಂತು. ನಂತರ ಪಕ್ಷ ಹಾಗೂ ಕುಟುಂಬ ಎರಡು ಭಾಗವಾಗಿ ಒಡೆಯಿತು.  ಒಟ್ಟಾರೆ ಆಡಳಿತ ವಿರೋಧಿ ಅಲೆ, ಕೌಟುಂಬಿಕ ಕಲಹ, ಹಗದೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹಲವು ಕಾರಣಗಳಿಂದಾಗಿ ಉತ್ತರ ಪ್ರದೇಶದಲ್ಲಿ ಸಮಾಜವಾಜದಿ ಪಕ್ಷ ಹೀನಾಯ ಸೋಲು ಅನುಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!