ನೇಪಾಳ ಉಪ ಪ್ರಧಾನಿ ಬಿಮಲೇಂದ್ರ ನಿಧಿ 
ದೇಶ

ಗಡಿ ಸಮಸ್ಯೆಯನ್ನು ರಾಜತಾಂತ್ರಿಕವಾಗಿ, ರಾಜಕೀಯವಾಗಿ ಬಗೆಹರಿಸಬೇಕು: ನೇಪಾಳ ಉಪ ಪ್ರಧಾನಿ

ನೇಪಾಳ ಮತ್ತು ಭಾರತ ನಡುವಿನ ಗಡಿ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಮತ್ತು ರಾಜಕೀಯವಾಗಿ...

ನವದೆಹಲಿ: ನೇಪಾಳ ಮತ್ತು ಭಾರತ ನಡುವಿನ ಗಡಿ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಬಗೆಹರಿಸಬೇಕೆಂದು ನೇಪಾಳ ಉಪ ಪ್ರಧಾನಿ ಬಿಮಲೇಂದ್ರ ನಿಧಿ ಹೇಳಿದ್ದಾರೆ.
ಭಾರತೀಯ ಭದ್ರತಾ ಪಡೆಯಿಂದ ನೇಪಾಳಿ ಪ್ರಜೆ ಹತ್ಯೆಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಅವರು ಈ ಹೇಳಿಕೆ ನೀಡಿದರು.
ಗಡಿ ವಿವಾದವನ್ನು ರಾಜತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಬಗೆಹರಿಸಬೇಕು. ಇದಕ್ಕಾಗಿ ಭಾರತ ಮತ್ತು ನೇಪಾಳ ಮಧ್ಯೆ ಜಂಟಿ ತಾಂತ್ರಿಕ ತಂಡವಿದೆ ಎಂದರು. ನಿಧಿಯವರು ಪ್ರಸ್ತುತ ದೆಹಲಿಯಲ್ಲಿದ್ದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಹತ್ಯೆ ಘಟನೆಯನ್ನು ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹತ್ಯೆಗೀಡಾದ ನೇಪಾಳಿ ಪ್ರಜೆಯ ಶವ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪರೀಕ್ಷೆ ಮಾಡಿಸಿದರೆ ಸತ್ಯ ಹೊರಬರುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗಡಿಯಲ್ಲಿ ಕದನದ ಸಂದರ್ಭದಲ್ಲಿ  ನೇಪಾಳಿ ಪ್ರಜೆ ಗೋವಿಂದ ಗೌತಮ್ ಹತ್ಯೆಗೆ ಸಂಬಂಧಪಟ್ಟಂತೆ ಭಾರತ ಈಗಾಗಲೇ ತನಿಖೆ ಆರಂಭಿಸಿದೆ. ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಉಭಯ ದೇಶಗಳ ನಾಯಕರು ಸಂಪರ್ಕದಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನಗಳ ವಿಧಾನಮಂಡಲ ಅಧಿವೇಶನ: ಬರ, ಕಸ್ತೂರಿ ರಂಗನ್ ವರದಿ ಬಗ್ಗೆ ಮಹತ್ವದ ಚರ್ಚೆ

KPSC ಹಗರಣ: ಮೊದಲ ತಲೆದಂಡ, IAS ಜ್ಞಾನೇಂದ್ರ ಕುಮಾರ್ ಅಮಾನತು

ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಬಿಜೆಪಿ ಶಾಸಕ ಸುರೇಶ್‌ಗೌಡ ಪುತ್ರಿಗೆ ಕೋರ್ಟ್ ಶಾಕ್, ಜಾಮೀನು ಅರ್ಜಿ ತಿರಸ್ಕೃತ

RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಬಿಗ್ ರಿಲೀಫ್: ಅಮಾನತು ಆದೇಶಕ್ಕೆ KSAT ತಡೆ, ಸರ್ಕಾರಕ್ಕೆ ಹಿನ್ನಡೆ

'ಲಾಲ್‌ಬಾಗ್ ಉಳಿಸಿ..': ಕೊನೆಗೂ ಹೋರಾಟಕ್ಕೆ ಮಣಿದ ಸರ್ಕಾರ; ವಿವಾದಿತ ಪಾರ್ಕ್ ತಿದ್ದುಪಡಿ ಮಸೂದೆ ವಾಪಸ್; BJP ಸ್ವಾಗತ; Video