ನವದೆಹಲಿ: ನಾಡಿದ್ದು ಗೋವಾ ವಿಧಾನಸಭೆಯಲ್ಲಿ ಸದನ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಕಾಂಗ್ರೆಸ್ ಅಲ್ಲಿ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವುದರ ವಿರುದ್ಧ ರಕ್ಷಣಾ ಖಾತೆಯ ಹೆಚ್ಚುವರಿ ಜವಾಬ್ದಾರಿ ಹೊತ್ತಿರುವ ಅರುಣ್ ಜೇಟ್ಲಿ ಇಂದು ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪಕ್ಷ ತುಂಬಾ ಆರೋಪ ಮಾಡುತ್ತಿದೆ. ಗೋವಾದಲ್ಲಿ ಜನರ ತೀರ್ಪನ್ನು ಬಿಜೆಪಿ ಕದ್ದಿದೆ ಎಂದು ಆರೋಪಿಸುತ್ತಿದೆ. ಅದು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಮನವಿ ಯಶಸ್ವಿಯಾಗಿಲ್ಲ. ಲೋಕಸಭೆಯಲ್ಲಿ ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿತು. ಸತ್ಯ ಯಾವುದು ಎಂದು ಜೇಟ್ಲಿ ಕೇಳಿದರು.