ದೇಶ

ಅತ್ಯಾಚಾರ ಆರೋಪಿ ಗಾಯತ್ರಿ ಪ್ರಜಾಪತಿಯ ಮೂವರು ಸಹಚರರ ಬಂಧನ

Lingaraj Badiger
ಲಖನೌ: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಸಚಿವ ಗಾಯತ್ರಿ ಪ್ರಜಾಪತಿ ಅವರ ಮೂವರು ಸಹಚರರನ್ನು ಮಂಗಳವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಟಾಸ್ಕ್ ಫೋರ್ಸ್ ತಂಡ ಇಂದು ಸೆಂಟ್ರಲ್ ಲಖನೌನ ಹಜರತ್ ಗಂಜ್ ಪ್ರದೇಶದಲ್ಲಿ ಮತ್ತೆ ಮೂವರನ್ನು ಬಂಧಿಸಿದ್ದು, ಇದರೊಂದಿಗೆ ಅತ್ಯಾಚಾರ ಪ್ರಕರಣ ಸಂಬಂಧ ಒಟ್ಟು ಆರು ಮಂದಿಯನ್ನು ಬಂಧಿಸಿದಂತಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಸತಿಶ್ ಗಣೇಶ್ ಅವರು ತಿಳಿಸಿದ್ದಾರೆ.
ಮಾರ್ಚ್ 7ರಂದು ಪ್ರಜಾಪತಿಯ ಇಬ್ಬರು ಸಹಚರರನ್ನು ಹಾಗೂ ಮಾರ್ಚ್ 6ರಂದು ಪ್ರಜಾಪತಿ ಅವರ ಗನ್ ಮ್ಯಾನ್ ಚಂದ್ರಪಾಲ್ ನನ್ನು ಬಂಧಿಸಲಾಗಿತ್ತು. 
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಸಚಿವ ಪ್ರಜಾಪತಿ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಪ್ರಜಾಪತಿ ಅವರ ಪಾಸ್ ಪೋರ್ಟ್ ಪತ್ತೆಯಾಗದ ಕಾರಣ ಲುಕ್ ಔಟ್ ನೊಟೀಸಾ ಸಹ ಜಾರಿ ಮಾಡಲಾಗಿದೆ.
SCROLL FOR NEXT