ದೇಶ

ಆಪ್ ಸರ್ಕಾರದ ಜಾಹೀರಾತು ಫಲಕ, ಪೋಸ್ಟರ್ ಗಳನ್ನು ತೆರವುಗೊಳಿಸಿ: ಚುನಾವಣಾ ಆಯೋಗಕ್ಕೆ ದೆಹಲಿ ಬಿಜೆಪಿ ಮನವಿ

Shilpa D
ನವದೆಹಲಿ: ದೆಹಲಿಯಲ್ಲಿ ಹಾಕಿರುವ ಆಮ್ ಆದ್ಮಿ ಪಕ್ಷದ ಸರ್ಕಾರದ ಪ್ರಚಾರ ಫಲಕ ಹಾಗೂ ಹೋರ್ಡಿಂಗ್ ಗಳನ್ನು ತೆರವುಗೊಳಿಸುವಂತೆ ಕೋರಿ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ದೆಹಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಎಸ್.ಕೆ ಶ್ರೀವಾತ್ಸವ ಅವರಿಗೆ ಪತ್ರ ಬರೆದಿರುವ ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್ ಜೀತ್ ಸಿಂಗ್ ಚಹಾಲ್, ದೆಹಲಿ ಮುನಿಸಿಪಾಲಿಟಿ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದ ಪರ ಪ್ರಚಾರವಿರುವ ಎಲ್ಲಾ ಹೋರ್ಡಿಂಗ್ಸ್ ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಹಾಗೂ ಸ್ಥಳೀಯ ಸಂಸ್ಥೆಗಳ ಅನಧಿಕೃತ ಪ್ರಚಾರ ಫಲಕಗಳನ್ನು  ತೆರವುಗೊಳಿಸಲು ದೆಹಲಿಯ ರಸ್ತೆಗಳನ್ನು ಸಮೀಕ್ಷೆ ನಡೆಸಬೇಕೆಂದು ನಗರ ಪೊಲೀಸ್ ಆಯುಕ್ತರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗ ಪತ್ರದಲ್ಲಿ ಬರೆಯಲಾಗಿದೆ.
ದೆಹಲಿಯ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿರುವ ಪೋಸ್ಟರ್ ಗಳನ್ನು ಕೂಡ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ. 
SCROLL FOR NEXT