ಟೋಕಿಯೋ: ಉತ್ತರ ಕೊರಿಯಾ ರಾಷ್ಟ್ರದ ಕಡಲ ಚಲನೆ ಸೇರಿದಂತೆ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆ ನಿಗಾ ಇಡಲು ಜಪಾನ್ ಮಾ.17 ರಂದು ಉಪಗ್ರಹ ಉಡಾವಣೆ ಮಾಡಿದೆ.
ಹೆಚ್-2 A ಹೆಸರಿನ ರಾಕೆಟ್ ನ್ನು ಜಪಾನ್ ಉಡಾವಣೆ ಮಾಡಿದ್ದು, ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೊರೇಷನ್ ಏಜೆನ್ಸಿ (ಜೆಎಎಕ್ಸ್ಎ) ಹಾಗೂ ಮಿಟ್ಸುಬಿಷಿ ಹೆವಿ ಇಂಡಸ್ಟ್ರೀಸ್ ನ ಸಹಯೋಗದಲ್ಲಿ ತಯಾರಿಸಲಾಗಿರುವ ರಾಕೆಟ್ ನ್ನು ಉಡಾವಣೆ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾ.15 ರಂದೇ ನಡೆಯಬೇಕಿದ್ದ ರಾಕೆಟ್ ನ ಉಡಾವಣೆ ಹವಾಮಾನ ವೈಪರಿತ್ಯದ ಕಾರಣದಿಂದ ವಿಳಂಬವಾಗಿತ್ತು. ಭೂಮಿಯಿಂದ ಹಲವು 100 ಕಿಮಿ ದೂರದಲ್ಲಿ ಚಿತ್ರಗಳನ್ನು ತೆಗೆಯಲು ಸಾಧ್ಯವಾಗುವ ರೀತಿಯಲ್ಲಿ ರಾಕೆಟ್ ನ್ನು ವಿನ್ಯಾಸಗೊಳಿಸಲಾಗಿದ್ದು, ಉತ್ತರ ಕೊರಿಯಾದಲ್ಲಿ ನಡೆಯುತ್ತಿರುವ ಖಂಡಾಂತರ ಕ್ಷಿಪಣಿ ಪರೀಕ್ಷೆಗಳ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ.