ದೇಶ

ಕೃಷ್ಣಮೃಗ ಬೇಟೆ ಪ್ರಕರಣ: ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದ ಜೋಧ್ ಪುರ ನ್ಯಾಯಾಲಯ

Sumana Upadhyaya
ಮುಂಬೈ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಮತ್ತು ಇತರರ ವಿರುದ್ಧದ ವಿಚಾರಣೆಯನ್ನು ಜೋಧಪುರ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಏಪ್ರಿಲ್ 1ಕ್ಕೆ ಮುಂದೂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಹಿಳಾ ಕಾರ್ಯಕರ್ತೆ ಮತ್ತು ವಕೀಲೆ ಅಭ ಸಿಂಗ್ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರು ಈ ವಿಷಯದಲ್ಲಿ ಮುಗ್ಧರಾಗಿದ್ದರೆ ಪ್ರತಿದಾವೆ ಸಲ್ಲಿಸಬೇಕು ಎಂದು ಹೇಳಿದರು.
ಸಲ್ಮಾನ್ ಖಾನ್ ಅವರು ಪದೇ ಪದೇ ನ್ಯಾಯಾಂಗವನ್ನು ತಮಾಷೆ ಮಾಡುತ್ತಿದ್ದಾರೆ. ಅವರು ಈ ಕೇಸಿನಲ್ಲಿ ನಿಜವಾಗಿಯೂ ತಪ್ಪಿತಸ್ಥ ಅಲ್ಲದಿದ್ದರೆ ಸುಳ್ಳು ಸಾಕ್ಷಿಯನ್ನು ದಾಖಲಿಸಬೇಕಿತ್ತು, ಅದು ಬಿಟ್ಟು ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದರು. ಸತ್ಯವೇನೆಂಬುದನ್ನು ನ್ಯಾಯಾಲಯ ತಿಳಿಸಬೇಕು ಎಂದು ಒತ್ತಾಯಿಸಿದರು.
1999ರಲ್ಲಿ ನಿರ್ದೇಶಕ ಸೂರಜ್ ಬರ್ಜತ್ಯ ಅವರ ಹಮ್ ಸಾತ್ ಸಾತ್ ಹೈ ಶೂಟಿಂಗ್ ಸಮಯದಲ್ಲಿ ಸಲ್ಮಾನ್ ಖಾನ್ ಸೈಫ್ ಆಲಿ ಖಾನ್, ನೀಲಂ, ಸೊನಾಲಿ ಬೇಂದ್ರೆ ಮತ್ತು ತಬು ಅವರ ಜೊತೆ ಸೇರಿ ಜೋಧ್ ಪುರದ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು ಎಂಬ ಆರೋಪವಿದೆ. 
ಸ್ಥಳೀಯ ಬಿಶ್ನೊಯಿ ಸಮುದಾಯದ ನಾಗರಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಮತ್ತು ಇತರ ನಟರ ವಿರುದ್ಧ ಕೇಸು ದಾಖಲಿಸಲಾಗಿತ್ತು.
SCROLL FOR NEXT