ನವದೆಹಲಿ: ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಮಾ.23 ರಂದು ಪಾಕಿಸ್ತಾನ ದಿನವನ್ನು ಆಚರಿಸಲಾಗಿದ್ದು, ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಮತ್ತೆ ಕಾಶ್ಮೀರ ವಿವಾದವನ್ನು ಕೆದಕಿದ್ದಾರೆ.
ಭಾರತದೊಂದಿಗೆ ಅತ್ಯುತ್ತಮ ಸೌಹಾರ್ದಯುತ ಸಂಬಂಧ ಹೊಂದಲು ಪಾಕಿಸ್ತಾನ ಇಚ್ಛಿಸುತ್ತಿದೆ ಎಂದು ಹೇಳಿರುವ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್, ಕಾಶ್ಮೀರಿಗಳ ಆಶಯದಂತೆ ಜಮ್ಮು-ಕಾಶ್ಮೀರ ವಿವಾದವನ್ನು ಬಗೆಹರಿಯಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನ ಭಾರತದೊಂದಿಗೆ ಅತ್ಯುತ್ತಮ ಸೌಹಾರ್ದಯುತ ಸಂಬಂಧ ಹೊಂದಲು ಬಯಸುತ್ತಿದೆ. ಕಾಶ್ಮೀರವೂ ಸೇರಿದಂತೆ ಭಾರತ-ಪಾಕ್ ನಡುವೆ ಇರುವ ಎಲ್ಲಾ ವಿವಾದಗಳೂ ಶೀಘ್ರವೇ ಬಗೆಹರಿಯುವ ವಿಶ್ವಾಸವಿದೆ ಎಂದು ಅಬ್ದುಲ್ ಬಸಿತ್ ಹೇಳಿದ್ದಾರೆ.