ಉತ್ತರ ಪ್ರದೇಶದ ಮಾದರಿಯಲ್ಲೇ ಬಿಹಾರದಲ್ಲೂ ಆಂಟಿ ರೋಮಿಯೋ ಪಡೆ ರಚಿಸಿ: ಬಿಜೆಪಿ
ಬೀದಿ ಕಾಮಣ್ಣರ ಕಾಟಕ್ಕೆ ಕಡಿವಾಣ ಹಾಕಲು ಉತ್ತರ ಪ್ರದೇಶದಲ್ಲಿ ಆಂಟಿ ರೋಮಿಯೋ ಪಡೆ ರಚಿಸಲಾಗಿರುವ ಮಾದರಿಯಲ್ಲೇ ಬಿಹಾರದಲ್ಲಿಯೂ ಮಹಿಳೆಯರ ಸುರಕ್ಷತೆಗಾಗಿ ಆಂಟಿ ರೋಮಿಯೋ ಪಡೆ ರಚನೆಯಾಗಬೇಕು ...
ಪಾಟ್ನಾ: ಬೀದಿ ಕಾಮಣ್ಣರ ಕಾಟಕ್ಕೆ ಕಡಿವಾಣ ಹಾಕಲು ಉತ್ತರ ಪ್ರದೇಶದಲ್ಲಿ ಆಂಟಿ ರೋಮಿಯೋ ಪಡೆ ರಚಿಸಲಾಗಿರುವ ಮಾದರಿಯಲ್ಲೇ ಬಿಹಾರದಲ್ಲಿಯೂ ಮಹಿಳೆಯರ ಸುರಕ್ಷತೆಗಾಗಿ ಆಂಟಿ ರೋಮಿಯೋ ಪಡೆ ರಚನೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಸಮಾಜಘಾತುಕರನ್ನು ಎದುರಿಸಲು, ಮಹಿಳೆಯರ ಭದ್ರತೆ ಒದಗಿಸಲು ಉತ್ತರ ಪ್ರದೇಶದ ಮಾದರಿಯಲ್ಲೇ ಆಂಟಿ ರೋಮಿಯೋ ಪಡೆ ರಚನೆಯಾಗಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದಾರೆ. ಬಿಹಾರ ಸರ್ಕಾರ, ಮಹಿಳೆಯರ ಸುರಕ್ಷತೆ ಹಾಗೂ ಆಂಟಿ ರೋಮಿಯೋ ಸ್ಕ್ವಾಡ್ ಗಳನ್ನು ಶಾಲೆ, ಕಾಲೇಜುಗಳಲ್ಲಿ ನಿಯೋಜಿಸಬೇಕು ಎಂದು ಸುಶೀಲ್ ಕುಮಾರ್ ಮೋದಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ಪ್ರೇಮ್ ಕುಮಾರ್ ಆಂಟಿ ರೋಮಿಯೋ ಪಡೆ ಮಾದರಿಯಲ್ಲೇ ಅಕ್ರಮ ಕಸಾಯಿಖಾನೆಗಳನ್ನೂ ಮುಚ್ಚಿಸಬೇಕು ಎಂದು ಬಿಹಾರ ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.