ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್
ನವದೆಹಲಿ: ನಾನು ತಪ್ಪು ಮಾಡಿಲ್ಲ. ಯಾವುದೇ ಕಾರಣಕ್ಕೂ ನಾನು ಕ್ಷಮೆಯಾಚಿಸುವುದಿಲ್ಲ, ಧೈರ್ಯವಿದ್ದರೆ ದೆಹಲಿ ಪೊಲೀಸರು ನನ್ನನ್ನು ಬಂಧಿಸಲಿ ಎಂದು ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಘಟನೆಯಲ್ಲಿ ನನ್ನ ತಪ್ಪೇನೂ ಇಲ್ಲ. ಯಾವುದೇ ಕಾರಣಕ್ಕೂ ನಾನು ಕ್ಷಮೆಯಾಚಿಸುವುದಿಲ್ಲ. ಮೊದಲು ವಿಮಾನ ಸಿಬ್ಬಂದಿಯೇ ನನ್ನ ಬಳಿ ಕ್ಷಮೆಯಾಚಿಸಬೇಕು. ಮೊದಲು ಅವರು ಕ್ಷಮಯಾಚಿಸದರೆ, ನಂತರ ನಾನು ಈ ಬಗ್ಗೆ ಆಲೋಚಿಸುತ್ತೇನೆಂದು ಹೇಳಿದ್ದಾರೆ,
ಪ್ರಕರಣ ಸಂಬಂಧ ದೆಹಲಿ ಪೊಲೀಸರು ನನ್ನನ್ನು ಬಂಧಿಸಿ ನೋಡಲಿ...ನಂತರ ಉದ್ಧವ್ ಜೀ ಅವರು ಮುಂದಿನ ಕ್ರಮಗಳನ್ನು ನಿರ್ಧರಿಸುತ್ತಾರೆಂದು ಎಚ್ಚರಿಸಿದ್ದಾರೆ.
ನನ್ನ ಬಳಿ ಟಿಕೆಟ್ ಇತ್ತು. ನನ್ನನ್ನು ಅವರು ನಿಷೇಧಿತ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಇಂದು ಸಂಜೆ ನಾನು ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಯಿಂದ ಪುಣೆಗೆ ಹೋಗಬೇಕಿದೆ. ನನ್ನ ಪ್ರವೇಶವನ್ನು ಹೇಗೆ ನಿರಾಕರಿಸುತ್ತಾರೆ?..ಎಂದು ಪ್ರಶ್ನಿಸಿದ್ದಾರೆ.
ನಿನ್ನೆಯಷ್ಟೇ ಗಾಯಕ್ವಾಡ್ ಅವರು ಪುಣೆಯಿಂದ ನವದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಬರುತ್ತಿದ್ದರು. ಈ ವೇಳೆ ಸೀಟಿನ ವಿಚಾರ ಕುರಿತಂತೆ ವಿಮಾನ ಸಿಬ್ಬಂದಿಗಳು ಹಾಗೂ ರವೀಂದ್ರ ಗಾಯಕ್ವಾಡ್ ಅವರ ನಡುವೆ ಜಗಳವಾಗಿದೆ. ಈ ಜಗಳ ತಾರಕ್ಕೇರಿದೆ. ಈ ವೇಳೆ ಗಾಯಕ್ವಾಡ್ ಅವರು ವಿಮಾನ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics