ಪಣಜಿ: ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದ ವೇಳೆ ಬ್ರಿಟಿಷ್ ಪ್ರಜೆಯೊಬ್ಬ ಮೃತಪಟ್ಟಿರುವ ಘಟನೆ ಗೋವಾದ ಕಲಂಗುಟೆಯಲ್ಲಿ ಶನಿವಾರ ನಡೆದಿದೆ.
ಪೌಲ್ ಗೆರಾಡ್ ಅಟ್ಕಿನ್ಸನ್ (58) ಮೃತಪಟ್ಟ ಬ್ರಿಟಿಷ್ ಪ್ರಜೆಯಾಗಿದ್ದಾನೆ. ನಿನ್ನೆ ಸಂಜೆ ಜಿಮ್ ಬಂದಿರುವ ಪೌಲ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ ಜೊತೆಗೆ ವೈದ್ಯರು ಸ್ಥಳಕ್ಕೆ ಬಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಪೌಲ್ ಅವರು ಮೃತಪಟ್ಟಿದ್ದಾರೆಂದೂ ತಿಳಿದುಬಂದಿದೆ.
ಹೃದಯಾಘಾತದಿಂದ ಪೌಲ್ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.
ಕಲಂಗುಟೆಯ ಮಡ್ಡೊವಾಡೋದ ಅಥಿತಿ ಗೃಹವೊಂದರಲ್ಲಿ ಉಳಿದುಕೊಂಡಿದ್ದ ಪೌಲ್ ಅವರು ಕಳೆದ ಫೆಬ್ರವರಿ ತಿಂಗಳಿನಲ್ಲಷ್ಟೇ ಜಿಮ್ ಸೇರಿಕೊಂಡಿದ್ದರು.
ಪೌಲ್ ಮೃತಪಟ್ಟಿರುವ ಕುರಿತಂತೆ ಈಗಾಗಲೇ ಬ್ರಿಟಿಷ್ ರಾಯಭಾರಿ ಆಯೋಗಕ್ಕೆ ಹಾಗೂ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಿವ್ಬಾ ದಾಲ್ವಿ ಅವರು ಹೇಳಿದ್ದಾರೆ.