ಇವಿಎಂ 
ದೇಶ

ಭಾರತದ ಮತಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ: ಚುನಾವಣಾ ಆಯೋಗ

ಭಾರತದ ಇವಿಎಂ ಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯಂತ ಸುರಕ್ಷಿತ ಯಂತ್ರವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ...

ನವದೆಹಲಿ: ಭಾರತದ ಇವಿಎಂ ಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯಂತ ಸುರಕ್ಷಿತ ಯಂತ್ರವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 
ಉತ್ತರಪ್ರದೇಶದ ಚುನಾವಣೆ ಬಳಿಕ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಹಲವರು ಇವಿಎಂ ಯಂತ್ರದಲ್ಲೇ ದೋಷವಿದೆ ಎಂದು ಆರೋಪಿಸಿದ್ದರು. ಇದಕ್ಕೆ ಅಂತ್ಯಹಾಡಲು ಯತ್ನಿಸಿರುವ ಚುನಾವಣಾ ಆಯೋಗ  ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಸಂಪೂರ್ಣ ಸುರಕ್ಷಿತ ಎಂದು ಹೇಳಿದೆ. 
ದೇಶದಲ್ಲಿ ಬಳಸುವ ಈ ಯಂತ್ರವನ್ನು ಯಾವುದೇ ಕಾರಣಕ್ಕೂ ನಕಲಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ಯಂತ್ರದ ವಿರುದ್ಧ ಯಾರೊಬ್ಬರೂ ನಿಖರ ದಾಖಲೆಯುಳ್ಳು ಆರೋಪ ಮಾಡಿಲ್ಲ. ಹೀಗಾಗಿ ಇಂತಹ ಆರೋಪಗಳನ್ನು ತಿರಸ್ಕರಿಸಬಹುದು ಎಂದು ಹೇಳಿದೆ. 
ರಾಜ್ಯ ಹಾಗೂ ಲೋಕಸಭಾ ಚುನಾವಣೆ ಸೇರಿದಂತೆ 107 ಚುನಾವಣೆಯಲ್ಲಿ ಈ ವಿದ್ಯುನ್ಮಾನ ಯಂತ್ರವನ್ನು ಬಳಸಲಾಗಿದೆ. ಯಾವುದೇ ಕಾರಣಕ್ಕೂ ಈ ಯಂತ್ರ ಸುಳ್ಳು ಫಲಿತಾಂಶ ನೀಡಲ್ಲ. ಬದಲಾಗಿ ಎಲ್ಲರೂ ಈ ಫಲಿತಾಂಶವನ್ನು ಒಪ್ಪಿಕೊಂಡಿದ್ದಾರೆ ಎಂದು ಆಯೋಗ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!