ದೇಶ

ಗಾಯಕ್ವಾಡ್'ಗೆ ನಿಷೇಧ ಹೇರುವುದಾದರೆ ಕಪಿಲ್ ಶರ್ಮಾ ವಿರುದ್ಧ ಏಕಿಲ್ಲ: ಶಿವಸೇನೆ ಪ್ರಶ್ನೆ

Manjula VN
ನವದೆಹಲಿ: ರವೀಂದ್ರ ಗಾಯಕ್ವಾಡ್ ವಿರುದ್ಧ ನಿಷೇಧ ಹೇರುವುದಾದರೆ, ನಟ ಕಪಿಲ್ ಶರ್ಮಾ ವಿರುದ್ಧವೂ ನಿಷೇಧ ಹೇರಿ ಎಂದು ಏರ್ ಇಂಡಿಯಾಗೆ ಶಿವಸೇನೆ ಸೋಮವಾರ ತಿಳಿಸಿದೆ. 
ಏರ್ ಇಂಡಿಯಾ ಸಿಬ್ಬಂದಿಗೆ ರವೀಂದ್ರ ಗಾಯಗ್ವಾಡ್ ಅವರು ಚಪ್ಪಲಿಯಲ್ಲಿ ಹೊಡೆದ ಪ್ರಕರಣ ಸಂಬಂಧ ನಿನ್ನೆ ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿ ಶಿವಸೇನೆ ಸದಸ್ಯ ಅನಂದ್ ರಾವ್ ಅಬ್ಸುಲ್ ಅವರು, ಗಾಯಕ್ವಾಡ್ ಅವರು ಏರ್ ಇಂಡಿಯಾ ಸಿಬ್ಬಂದಿಗೆ ಹೊಡೆದಿದ್ದಾರೆ. ಇದು ತಪ್ಪು ಎಂಬುದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಆದರೆ, ಪ್ರಕರಣ ಸಂಬಂಧ ಏರ್ ಇಂಡಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಿತ್ತು. ಮುಂದಿನ ಬೆಳವಣಿಗೆ ಹಾಗೂ ಫಲಿತಾಂಶಗಳನ್ನು ನಾವು ಒಪ್ಪಿಕೊಳ್ಳುತ್ತಿದ್ದೆವು. ಇದರಿಂದ ನಮಗೆ ಸಮಸ್ಯೆಯಿರುತ್ತಿರಲಿಲ್ಲ. ಆದರೆ, ಗಾಯಕ್ವಾಡ್ ಅವರಿಗೆ ಏರ್ ಇಂಡಿಯಾ ನಿಷೇಧ ಹೇರಿರುವ ಕ್ರಮ ಸರಿಯಿಲ್ಲ ಎಂದು ಹೇಳಿದ್ದಾರೆ. 
ಏರ್ ಇಂಡಿಯಾ ಗಾಯಕ್ವಾಡ್ ಅವರನ್ನು ನಿಷೇಧಿಸಿರುವುದು ಮುಖ್ಯವಾದ ಸಮಸ್ಯೆಯಾಗಿದೆ. ದೇಶದಲ್ಲಿರುವ ಜನರು ಎಲ್ಲಿ ಬೇಕಾದರೂ ಹೋಗಬಹುದು ಎಂಬುದನ್ನು ಸಂವಿಧಾನ ಹೇಳಿದೆ. ಒಂದು ಘಟನೆಯನ್ನು ಆಧರಿಸಿ ಎಲ್ಲಾ ಏರ್'ಲೈನ್ಸ್ ಗಳೂ ಗಾಯಕ್ವಾಡ್ ಅವರ ಮೇಲೆ ನಿಷೇಧ ಹೇರಿರುವುದು ಸರಿಯಲ್ಲ. 
ನಟ ಕಪಿಲ್ ಶರ್ಮಾ ಅವರೂ ಕೂಡ ಸಹ ನಟರೊಬ್ಬ ಜೊತೆಗೆ ವಿಮಾನದಲ್ಲಿಯೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಸಭ್ಯವಾಗಿ ವರ್ತಿಸಿದ್ದರು. ಅವರ ಮೇಲೆ ಏರ್ ಇಂಡಿಯಾ ಏಕೆ ನಿಷೇಧ ಹೇರಿಲ್ಲ. ಜನರನ್ನು ಪ್ರತಿನಿಧಿಯ ವ್ಯಕ್ತಿಯ ಮೇಲೆ ನಿಷೇಧ ಹೇರಲಾಗಿದೆ. ಕೂಡಲೇ ಏರ್ ಇಂಡಿಯಾ ಗಾಯಕ್ವಾಡ್ ಅವರ ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆಯಬೇಕಿದೆ ಎಂದು ಆಗ್ರಹಿಸಿದ್ದಾರೆ. 
SCROLL FOR NEXT