ಸಾಂದರ್ಭಿಕ ಚಿತ್ರ 
ದೇಶ

ಏಪ್ರಿಲ್ 1ರಿಂದ ಭಾರತ್ ಸ್ಟೇಜ್-3 ವಾಹನಗಳ ಮಾರಾಟಕ್ಕೆ ಸುಪ್ರೀಂ ನಿರ್ಬಂಧ!

ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ IV ಏಪ್ರಿಲ್ 1ರಿಂದ ಜಾರಿಗೆ....

ನವದೆಹಲಿ: ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ IV ಏಪ್ರಿಲ್ 1ರಿಂದ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮಾಲಿನ್ಯಕಾರಕ ಬಿಎಸ್ III ವಾಹನಗಳ ನೋಂದಣಿ ಮತ್ತು ಮಾರಾಟವನ್ನು ಸುಪ್ರೀಂಕೋರ್ಟ್ ನಿರ್ಬಂಧಿಸಿದೆ.
ಪರಿಸರ ಮಾಲಿನ್ಯ  ನಿಯಂತ್ರಣ ಮಂಡಳಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಾಣಿಜ್ಯ ಹಿತಾಸಕ್ತಿಗಿಂತ ಲಕ್ಷಾಂತಕ ಜನರ ಆರೋಗ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿದೆ. ಅದೇ ವೇಳೆ ಮಾರ್ಚ್ 31ರ ಬಳಿಕ ಬಿಎಸ್ III (ಭಾರತ್ ಸ್ಟೇಜ್ III)  ವಾಹನಗಳ ನೋಂದಣಿ ಮಾಡದಂತೆ ಸರ್ಕಾರಕ್ಕೆ ಆದೇಶಿಸಿದ ನ್ಯಾಯಾಲಯ ಈ ವಾಹನಗಳ ಮಾರಾಟವನ್ನು ನಿಷೇಧಿಸಿ ತೀರ್ಪು ನೀಡಿದೆ.
ವಾಹನ ತಯಾಕರು ತಮ್ಮ ವಾಹನಗಳನ್ನು ಬಿಎಸ್ IV ಮಾನದಂಡಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿಸಬೇಕು ಮತ್ತು ಇದನ್ನು ಸರ್ಕಾರ ಖಾತ್ರಿ ಪಡಿಸಬೇಕು ಎಂದು ಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್‍ನ ಈ ತೀರ್ಪಿನಿಂದಾಗಿ ಮಾರಾಟಕ್ಕೆ ಸಿದ್ಧವಾಗಿರುವ ಸರಿಸುಮಾರು 8 ಲಕ್ಷ ಬಿಎಸ್ III ವಾಹನಗಳ ಮೇಲೆ ಹೊಡೆತ ಬೀಳಲಿದೆ.
ಏನಿದು ಭಾರತ್ ಸ್ಟೇಜ್ ?
ವಾಹನಗಳಲ್ಲಿನ ಮಾಲಿನ್ಯ ಮಟ್ಟವನ್ನು ಗುರುತಿಸುವ ವ್ಯವಸ್ಥೆ ಅಥವಾ ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡವನ್ನು ಭಾರತ್ ಸ್ಟೇಜ್ ಎಂದು ಕರೆಯುತ್ತಾರೆ.  ವಾಹನಗಳ ಎಂಜಿನ್‌ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಹೊರ ಸೂಸಬೇಕು ಎಂಬುದನ್ನು ಈ ಮೂಲಕ ನಿಗದಿಪಡಿಸಲಾಗುತ್ತದೆ.
ಈ ಪರಿಸರ ಮಾಲಿನ್ಯ ನಿಯಂತ್ರಣದ ಮಾನದಂಡಗಳನ್ನು ಅನುಸರಿಸಲು ವಾಹನಗಳ ಎಂಜಿನ್‌ ಗುಣಮಟ್ಟ ಅತ್ಯಾಧುನಿಕವಾಗಿದ್ದರೆ ಸಾಲದು, ಇಂಧನದ ಗುಣಮಟ್ಟವೂ ಹೆಚ್ಚಬೇಕಿತ್ತು.
ಈ ಮಾನದಂಡಗಳ ಜಾರಿ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳು, ವೆಚ್ಚ, ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಎರಡು ಸಮಿತಿಗಳನ್ನು ರಚಿಸಿತ್ತು. ಯೂರೋಪ್‌ನಲ್ಲಿ ಜಾರಿಯಲ್ಲಿರುವ ಮಾನದಂಡಗಳನ್ನು ಜಾರಿಗೆ ತರುವಂತೆ ಈ ಸಮಿತಿಗಳು ಶಿಫಾರಸು ಮಾಡಿತು. ಸರ್ಕಾರ ಅದನ್ನು ಒಪ್ಪಿಕೊಂಡು ಜಾರಿಗೆ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video