ದೇಶ

'ಯೋಗಿ ಆದಿತ್ಯನಾಥ್ ಎಫೆಕ್ಟ್: ರಾಮ ಮಂದಿನ ನಿರ್ಮಾಣಕ್ಕೆ ಮುಸ್ಲಿಮರ ಬೆಂಬಲ!

Manjula VN
ಲಖನೌ: ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶದಲ್ಲಿ ಒಂದಲ್ಲ ಒಂದು ಮಹತ್ವದ ಬೆಳವಣಿಗೆಗಳು ಕಾಣುತ್ತಿವೆ. 
ಅಕ್ರಮ ಕಸಾಯಿಖಾನೆಗಳ ಮೇಲಿನ ದಾಳಿ, ತ್ರಿವಳಿ ತಲಾಖ್ ಹೀಗೆ ಮತ್ತಿತರ ವಿಚಾರಗಳು ಚರ್ಚೆಯಲ್ಲಿರುವ ಸಂದರ್ಭದಲ್ಲಿಯೇ ಆಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣಕ್ಕೆ ಲಖನೌ ಮುಸ್ಲಿಮರು ಬೆಂಬಲ ವ್ಯಕ್ತಪಡಿಸಿರುವ ಮಹತ್ತರ ಬೆಳವಣಿಗೆಯೊಂದು ಕಂಡು ಬಂದಿದೆ. 
ರಾಮ ಮಂದಿನ ನಿರ್ಮಾಣದ ವಿಚಾರ ಮತ್ತೆ ಬಲ ಪಡೆದುಕೊಂಡಿದೆ. ನ್ಯಾಯಾಲಯದ ಹೊರಗಡೆಯೇ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಈ ಹಿಂದೆ ಸೂಚಿಸಿತ್ತು. ಇದರ ಬೆನ್ನಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲಿಸಿ ಲಖನೌನಲ್ಲಿ ಮುಸ್ಲಿಮರು ಹಾಕಿರುವ ಬ್ಯಾನರ್'ವೊಂದು ಇದೀಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. 
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬೆಂಬಲಿಸಿ ಲಖನೌನಲ್ಲಿ ಮುಸ್ಲಿಂ ಪ್ರಮುಖರೇ ಬೃಹತ್ ಕಟೌಟ್ ಗಳನ್ನು ಹಾಗಿದ್ದಾರೆ. ರಾಮ ಮಂದಿರ ನಿರ್ಮಾಣ ಮುಸ್ಲಿಂ ಕರ ಸೇವಕ ಸಂಘದ ಅಧ್ಯಕ್ಷ ಅಜಂ ಖಾನ್ ಅವರ ನೇತೃತ್ವದಲ್ಲಿ 10 ಬ್ಯಾನರ್ ಗಳನ್ನು ಹಾಕಲಾಗಿದೆ. ರಾಮ ಮಂದಿನ ಬೆಂಬಲಿಸುತ್ತಿರುವ ಮುಸ್ಲಿಂ ನಾಯಕರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT