ದೇಶ

ಒಡಿಶಾದಲ್ಲಿ ನಕ್ಸಲರ ಅಟ್ಟಹಾಸ: ರೈಲ್ವೇ ನಿಲ್ದಾಣದ ಬಳಿ ಅವಳಿ ಸ್ಫೋಟ

Manjula VN

ಭುವೇಶ್ವರ: ಒಡಿಶಾದ ದಹಿಕಲ್ ರೈಲು ನಿಲ್ದಾಣದ ಬಳಿ ನಕ್ಸಲರು ಅಟ್ಟಹಾಸ ಮರೆದಿದ್ದು, ಅವಳಿ ಬಾಂಬ್ ಸ್ಫೋಟಿಸಿರುವುದಾಗಿ ಶುಕ್ರವಾರ ವರದಿಗಳು ತಿಳಿಸಿವೆ. 

ಗುರುವಾರ ರಾತ್ರಿ ರಾಯಗಢ ಜಿಲ್ಲೆಯ ದಹಿಕಲ್ಲು ರೈಲ್ವೇ ನಿಲ್ದಾಣದ ಬಂದಿರುವ 12-13ಕ್ಕೂ ಹೆಚ್ಚು ನಕ್ಸಲರು ರೈಲ್ವೇ ಹಳಿಗಳ ಬಳಿ ಅವಳಿ ಬಾಂಬ್ ಸ್ಫೋಟಿಸಿದ್ದಾರೆಂದು ತಿಳಿದುಬಂದಿದೆ. 

ಮೊದಲು ಮಣಿಪುಡ ರೈಲ್ವೇ ನಿಲ್ದಾಣದ ಬಳಿ ಬಂದಿರುವ ನಕ್ಸಲರು ಸ್ಟೇಷನ್ ಮಾಸ್ಟರ್ ಕಚೇರಿಗೆ ನುಗ್ಗಿದ್ದಾರೆ ನಂತರ ಅಧಿಕಾರಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ನಂತರ ಸ್ಥಳದಲ್ಲಿ ನಿಲ್ಲಿಸಿದ್ದ ಸರಕು ರೈಲಿನ ಇಂಜಿನ್ ಸ್ಫೋಟಗೊಳ್ಳುವಂತೆ ಮಾಡಿದ್ದಾರೆ. ನಂತರ ಸ್ಟೇಷನ್ ಮಾಸ್ಟರ್'ನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ನಕ್ಸಲು ಕೆಲ ಪೋಸ್ಟರ್ ಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. 

ಪ್ರಸ್ತುತ ಸಿಕ್ಕಿರುವ ಪೋಸ್ಟರ್ ಗಳಲ್ಲಿ ಪ್ರಧಾನಿ ಮೋದಿಯವರ ಒಡಿಶಾ ಭೇಟಿ ವಿರೋಧಿಸಿ ನಕ್ಸಲರು ಈ ಕೃತ್ಯ ವೆಸಗಿರುವುದಾಗಿ ತಿಳಿದುಬಂದಿದೆ. 

ಏಪ್ರಿಲ್ 15-16ರಂದು ಒಡಿಶಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಡಿಶಾಗೆ ಭೇಟಿ ನೀಡಲಿದ್ದಾರೆ. 

ರೈಲ್ವೇ ಹಳಿಗಳನ್ನು ಸ್ಫೋಟಿಸಿರುವ ಹಿನ್ನಲೆಯಲ್ಲಿ ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವುದಾಗಿ ವರದಿಗಳಾಗಿಲ್ಲ. 

ಸುದ್ದಿ ತಿಳಿಯುತ್ತಿದ್ದಂತೆಯೇ ಪೂರ್ವ ಕರಾವಳಿ ರೈಲ್ವೇ ಅಧಿಕಾರಿ ಎಸ್.ಪಿ. ಶಿವ ಸುಬ್ರಮಣಿ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ರೈಲ್ವೇ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಯಿಂದ ವೇಗದ ಮಿತಿಯೊಂದಿಗೆ ಸರಕು ರೈಲುಗಳ ಸಂಚಾರ ಆರಂಭವಾಗಿದೆ. ಸರಕು ರೈಲುಗಳ ಚಟುವಟಿಕೆಗಳು ಸಾಮಾನ್ಯತೆಗೆ ಬಂದ ನಂತರವಷ್ಟೇ ಪ್ರಯಾಣಿಕರ ರೈಲುಗಳ ಸಂಚಾರವನ್ನು ಆರಂಭಿಸುತ್ತವೆ ಎಂದು ಸುಬ್ರಮಣಿ ಅವರು ಹೇಳಿದ್ದಾರೆ. 
SCROLL FOR NEXT