ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ 
ದೇಶ

ರಸ್ತೆಯಲ್ಲಿ ಸೈಕಲ್ ಸವಾರಿಗೆ ನಿಷೇಧವಿಲ್ಲ; ಕೇಂದ್ರ ಸಚಿವ ನಿತಿನ್ ಗಡ್ಕರಿ

ರಸ್ತೆಗಳಲ್ಲಿ ಸೈಕಲ್'ಗಳ ಬಳಕೆಗೆ ನಿಷೇಧ ಹೇರುವ ಯಾವುದೇ ಚಿಂತನೆಗಳಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ...

ಮಂಬೈ: ರಸ್ತೆಗಳಲ್ಲಿ ಸೈಕಲ್'ಗಳ ಬಳಕೆಗೆ ನಿಷೇಧ ಹೇರುವ ಯಾವುದೇ ಚಿಂತನೆಗಳಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. 
ಪ್ರಮುಖ ರಸ್ತೆಗಳಲ್ಲಿ ಮೋಟಾರ್ ಯೇತರ ಸಾರಿಗೆ ನಿಷೇಧಕ್ಕೆ ಸಂಸದೀಯ ಸಮಿತಿ ಚಿಂತಿಸುತ್ತಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ರಸ್ತೆಗಳಲ್ಲಿ ಸೈಕಲ್ ಗಳ ಬಳಕೆಗೆ ನಿಷೇಧ ಹೇರುವ ಬಗ್ಗೆ ಯಾವುದೇ ಪ್ರಸ್ತವಾನೆಗಳಿಲ್ಲ. ಪರಿಸರ ಮಾಲಿನ್ಯ ತಡೆಗಟ್ಟುವ ಚಟುವಟಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ. ಪರಿಸರ ಮಾಲಿನ್ಯ ನಿಯಂತ್ರಿಸುವುದಕ್ಕೆ ಸೈಕಲ್ ಸವಾರಿ ಬಳಕೆ ಅತ್ಯುತ್ತಮ ಸಾರಿದೆ ವಿಧಾನವಾಗಿದ್ದು, ಸಾಧ್ಯವಾದಷ್ಟು ಸೈಕಲ್ ಬಳಸಿ ಎಂದು ದೇಶವಾಸಿಗಳನ್ನು ವಿನಂತಿಸುತ್ತಿದ್ದೇನೆಂದು ಹೇಳಿದ್ದಾರೆ. 
ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಪರಿಶ್ರಮಗಳನ್ನು ಪಡುತ್ತಿದೆ. ನಮ್ಮ ಸರ್ಕಾರ ಸೈಕ್ಲಿಂಗ್ ನ್ನು ಉತ್ತೇಜಿಸಲು ಬಯುಸುತ್ತದೆ. ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಸೈಕಲ್ ಸವಾರಿ ಅತ್ಯುತ್ತಮ ವಿಧಾನವಾಗಿದೆ. ಪ್ರಸ್ತುತ ನಿರ್ಮಾಣಗೊಳ್ಳುತ್ತಿರುವ ದೆಹಲಿ-ಮೀರುತ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸೈಕಲ್ ಗಳಿಗಾಗಿಯೇ ಪ್ರತ್ಯೇಕ ಲೇನ್ ಗಳ ವ್ಯವಸ್ಥೆ, ತನ್ನ ಲೋಕಸಭಾ ಕ್ಷೇತ್ರ ನಾಗ್ಪುರ ಸೇರಿದಂತೆ ಹಲವಾಗು ನಗರಗಳಲ್ಲಿ ವಿಶೇಷ ಸೈಕಲ್ ಮಾರ್ಗಗಳು ಸೇರಿದಂತೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ. 
ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ 2016ನ್ನು ಪರಿಶೀಲಿಸುತ್ತಿರುವ ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿರುವ ವರದಿಯು, ಮಹಾನಗರಗಳಲ್ಲಿ ಪಾದಚಾರಿಗಳು ಮತ್ತು ಮೋಟಾರೇತರ ವಾಹನಗಳು ಮುಖ್ಯರಸ್ತೆಗಳು ಮತ್ತು ಹೆದ್ದಾರಿಗಳನ್ನು ಬಳಸುವುದನ್ನು ನಿರ್ಬಂಧಿಸುವಂತೆ ಶಿಫಾರಸ್ತು ಮಾಡಿದೆ. ಇದರಿಂದ ತೀವ್ರವಾಗಿ ಕೆಂಡಾಮಂಡಲವಾಗಿರುವ 7,500ಕ್ಕೂ ಹೆಚ್ಚು ಸೈಕಲ್ ಪ್ರಿಯರು, ಇದು ಜನವಿರೋಧಿ, ಬಡವರ ವಿರೋಧಿಯಾಗಿರುವ ಜೊತೆಗೆ ತಾರತಮ್ಯದಿಂದ ಕೂಡಿರುವುದರಿಂದ ಸಮಿತಿಯ ಶಿಫಾರಸನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ಆನ್ ಲೈನ್ ಅರ್ಜಿಗೆ ಸಹಿ ಹಾಕಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ