ಸಂಗ್ರಹ ಚಿತ್ರ 
ದೇಶ

ಹುತಾತ್ಮ ಯೋಧರಿಗೆ ಆರ್ಥಿಕ ನೆರವಿಗೆ ನಟ ಅಕ್ಷಯ್ ಹೇಳಿದಂತೆ ವೆಬ್ ಸೈಟ್

ಗಡಿ ಕಾಯುವ ವೇಳೆ ವೀರ ಮರಣವನ್ನಪ್ಪುವ ಅರೆಸೇನಾ ಪಡೆ ಸಿಬ್ಬಂದಿ ಕುಟುಂಬಕ್ಕಾಗಿ ಸಾರ್ವಜನಿಕರೇ ದೇಣಗೆ ಸಂಗ್ರಹಿಸಲು ನೆರವಾಗುವ ವೆಬ್ ಸೈಟ್ ಶೀಘ್ರವೇ ಅಸ್ವಿತ್ವಕ್ಕೆ ಬರಲಿದೆ...

ನವದೆಹಲಿ: ಗಡಿ ಕಾಯುವ ವೇಳೆ ವೀರ ಮರಣವನ್ನಪ್ಪುವ ಅರೆಸೇನಾ ಪಡೆ ಸಿಬ್ಬಂದಿ ಕುಟುಂಬಕ್ಕಾಗಿ ಸಾರ್ವಜನಿಕರೇ ದೇಣಗೆ ಸಂಗ್ರಹಿಸಲು ನೆರವಾಗುವ ವೆಬ್ ಸೈಟ್ ಶೀಘ್ರವೇ ಅಸ್ವಿತ್ವಕ್ಕೆ ಬರಲಿದೆ. 
ಯೋಧರ ಕುಟುಂಬಕ್ಕೆ ಸಾರ್ವಜನಿಕರೇ ನೆರವು ನೀಡುವ ವ್ಯವಸ್ಥೆ ಕಲ್ಪಿಸಿ ಎಂಬ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ಪರಿಗಣಿಸಿದೆ. ಈಗಾಗಲೇ ವೆಬ್ ಸೈಟ್ ಕುರಿತಂತೆ ಬ್ಲ್ಯೂಪ್ರಿಂಟ್ ವೊಂದು ತಯಾರಾಗಿದ್ದು, ಗೃಹಸಚಿವಾಲಯದ ಅಡಿಯಲ್ಲಿಯೇ ವೆಬ್ ಸೈಟ್ ಆರಂಭವಾಗಲಿದೆ. 
ವೆಬ್ ಸೈಟ್ ನಲ್ಲಿ ಗಡಿಯಲ್ಲಿ ಹುತಾತ್ಮರಾದ ಯೋಧನ ಹೆಸರು, ಕುಟುಂಬಸ್ಥರ ಹೆಸರು ಮತ್ತು ಬ್ಯಾಂಕ್ ಮಾಹಿತಿಗಳು ಆನ್ ಲೈನ್ ನಲ್ಲಿ ಲಭ್ಯವಾಗಲಿದ್ದು. ಆನ್ ಲೈನ್ ಮೂಲಕವೇ ಯೋಧರ ಕುಟುಂಬಕ್ಕೆ ನೆರವು ನೀಡಬಹುದಾಗಿದೆ. ಓರ್ವ ಯೋಧನ ಕುಟುಂಬ ಸಾರ್ವಜನಿಕರಿಂದ ಗರಿಷ್ಟ ರೂ. 15 ಲಕ್ಷದವರೆಗೂ ದೇಣಿಗೆಯನ್ನು ಪಡೆಯಬಹುದಾಗಿದೆ.
ಹುತಾತ್ಮ ಯೋಧರಿಗೆ ಸರ್ಕಾರ ನೆರವು ನೀಡುತ್ತದೆ. ಆದರೆ, ನೆರವು ನೀಡಲು ಇಚ್ಛಿಸುವ ಸಾರ್ವಜನಿಕರಿಗೂ ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದು ಹಿರಿಯ ಆಧಿಕಾರಿ ಹೇಳಿದ್ದಾರೆ. 
ಮುಂದಿನ ವಾರದಲ್ಲಿ ವೆಬ್ ಸೈಟ್ ಆರಂಭವಾಗಲಿದೆ. ವೆಬ್ ಸೈಟ್ ನಲ್ಲಿ ಹುತಾತ್ಮರಾದ ಯೋಧರ ಬಗ್ಗೆ ಸಾಕಷ್ಟು ಮಾಹಿತಿಗಳಿರುತ್ತವೆ. ಯೋಧನ ವಯಸ್ಸು, ಅವರ ಗ್ರಾಮದ ವಿಳಾಸಗಳು, ಅವರ ಸೇವಾ ದಾಖಲಾತಿಗಳು, ಕುಟುಂಬ ಹಾಗೂ ಬ್ಯಾಂಕ್ ಖಾತೆಗಳ ವಿವರಗಳಿರುತ್ತವೆ. ಇದಲ್ಲದೆ, ಗಾಯಗೊಂಡು ಚಿಕಿತ್ಸೆಯಲ್ಲಿರುವ ಯೋಧರ ಬಗ್ಗೆಯೂ ವೆಬ್ ಸೈಟ್ ಗಳಲ್ಲಿ ಮಾಹಿತಿ ನೀಡಲಾಗಿತುತ್ದೆ. ಅಂತಹ ಯೋಧರಿಗೂ ಸಾರ್ವಜನಿಕರು ನೆರವು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ. 
ಆರೆಸೈನಿಕ ಪಡೆಯ ಅಥವಾ ಸಿಎಪಿಎಫ್ ಪಡೆದ ಅಧಿಕಾರಿಗಳು  ಈ ವೆಬ್ ಸೈಟ್ ಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ವೆಬ್ ಸೈಟ್ ನಲ್ಲಿರುವ ಎಲ್ಲಾ ದಾಖಲೆಗಳನ್ನು ಇವರೇ ನೋಡಿಕೊಳ್ಳುತ್ತಿರುತ್ತಾರೆ. ಆ್ಯಂಡ್ರಾಯ್ಡ್ ಹಾಗೂ ಐ-ಫೋನ್ ಗಳಿಗೂ ಆ್ಯಪ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. 
ಛತ್ತೀಸ್ಗಢದ ಸುಕ್ಮಾದಲ್ಲಿ ಮಾರ್ಚ್ 11 ರಂದು ನಕ್ಸಲರು ಅಟ್ಟಹಾಸ ಮೆರೆದಿದ್ದರು. ದಾಳಿಯಲ್ಲಿ 12 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ವೇಳೆ ನೆರವಿನ ಹಸ್ತ ಚಾಚಿದ್ದ ನಟ ಅಕ್ಷಯ್ ಕುಮಾರ್ ಅವರು ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ ರೂ.9 ಲಕ್ಷ ಹಣವನ್ನು ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!