ಪುಲ್ವಾಮ ಬ್ಯಾಂಕ್ ದರೋಡೆ ಪ್ರಕರಣ: ಉಗ್ರನ ಸುಳಿವಿಗೆ ರೂ.10 ಲಕ್ಷ ಬಹುಮಾನ ಘೋಷಣೆ 
ದೇಶ

ಪುಲ್ವಾಮ ಬ್ಯಾಂಕ್ ದರೋಡೆ ಪ್ರಕರಣ: ಉಗ್ರನ ಸುಳಿವಿಗೆ ರೂ.10 ಲಕ್ಷ ಬಹುಮಾನ ಘೋಷಣೆ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರನ ಕುರಿತು ಸುಳಿವು ನೀಡಿದವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರನ ಕುರಿತು ಸುಳಿವು ನೀಡಿದವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ ಅಧಿಕಾರಿಗಳು ಶುಕ್ರವಾರ ಘೋಷಣೆ ಮಾಡಿದ್ದಾರೆ. 
ಉಗ್ರನ ಕುರಿತಂತೆ ಪೋಸ್ಟರ್ ಗಳನ್ನು ಬೀದಿ ಬೀದಿಗಳಲ್ಲಿ ಅಂಟಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಉಗ್ರನ ಕುರಿತು ಮಾಹಿತಿ ನೀಡಿದವರಿಗೆ ರೂ.10 ಲಕ್ಷ ಇನಾಮು ನೀಡುವುದಾಗಿ ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ಘಟಕದ ಮೇಲೆ ದಾಳಿ ಮಾಡಿದ್ದ ಉಗ್ರರು, ರೂ.4.92 ಲಕ್ಷ ದರೋಡೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆಯಾದ ಕೆಲವೇ ದಿನಗಳಲ್ಲಿ ಕಾಲ್ಗಾಂ ಬ್ಯಾಂಕ್ ವಾಹನವೊಂದರ ಮೇಲೆ ದಾಳಿ ಮಾಡಿದ್ದ ಉಗ್ರರು ಇಬ್ಬರು ಸಿಬ್ಬಂದಿಗಳು ಹಾಗೂ 5 ಮಂದಿ ಪೊಲೀಸನ್ನು ಹತ್ಯೆ ಮಾಡಿ ರೂ.50 ಲಕ್ಷ ಹಣವನ್ನು ದೋಚಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

ಚುನಾವಣೆಗೂ ಮುನ್ನ ಯೋಗಿ ಸರ್ಕಾರದಲ್ಲಿ ಮಹತ್ತರ ಬದಲಾವಣೆ: ಸಂಪುಟ ಪುನಾರಚನೆ; 6 ಹೊಸ ಸಚಿವರ ಸೇರ್ಪಡೆ

ಅತ್ತ ವಿಜಯ್ ಪದಗ್ರಹಣ, ಇತ್ತ ಚಂದ್ರಬಾಬು ನಾಯ್ಡು, Pawan Kalyan ಮನೆಗೆ ಪ್ರಧಾನಿ ಮೋದಿ ದಿಢೀರ್ ಭೇಟಿ: ರಾಜಕೀಯ ವಲಯದಲ್ಲಿ ಸಂಚಲನ!

IPL 2026: ನಿರ್ಣಾಯಕ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದ CSK; ಪ್ಲೇ ಆಫ್ ಕನಸು ಜೀವಂತ!

IPL 2026, RCB vs MI: MS Dhoni ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ

SCROLL FOR NEXT