ಬಾಘ್ಪತ್: ನೋವು ಅನುಭವಿಸುವುದಕ್ಕಿಂತ ನಮಗೆ ದಯಾಮರಣ ಕೊಟ್ಟುಬಿಡಿ ಎಂದು ನೊಂದ ರೈತರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.
ಕಬ್ಬು ಬೆಳೆಗಾರರಿಗೆ ಸರ್ಕಾರ ಸೂಕ್ತ ರೀತಿಯ ಹಣವನ್ನು ಪಾವತಿ ಮಾಡದಿರುವುದಕ್ಕೆ ನೊಂದಿರುವ ರೈತರು ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಹಾಕಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯ ಮುಖ್ಯಮಂತ್ರಿಗಳು ರೈತರ ಸಮಸ್ಯೆ ಕುರಿತಂತೆ 15 ದಿನಗಳೊಳಗಾಗಿ ನಿರ್ಧಾರವನ್ನು ಕೈಗೊಳ್ಳಬೇಕು. ನಮಗೆ ನೋವುಗಳನ್ನು ಸಹಿಸಿಕೊಂಡು ಸಾಕಾಗಿದೆ. ಇನ್ನು ನೋವನ್ನು ಸಹಿಸಲು ಸಾಧ್ಯವಿಲ್ಲ. 15 ದಿನಗಳೊಳಗಾಗಿ ನಿರ್ಧಾರಗೊಳ್ಳದಿದ್ದಲ್ಲಿ 16ನೇ ದಿನ ಆತ್ಯಹತ್ಯೆಮಾಡಿಕೊಳ್ಳುತ್ತೇವೆಂದು ಪತ್ರದಲ್ಲಿ ರೈತರು ತಿಳಿಸಿದ್ದಾರೆ.