ನವದೆಹಲಿ: ದೆಹಲಿ ಮುಖ್ಯಮಂತ್ರಿ ಆರವಿಂದ ಕೇಜ್ರಿವಾಲ್ ವಿರುದ್ಧ ಲಂಚ ಆರೋಪ ಮಾಡಿರುವ ಮಾಜಿ ಸಚಿವ ಕಪಿಲ್ ಮಿಶ್ರಾ ಸುಳ್ಳು ಪತ್ತೆ ಪರೀಕ್ಷೆಗೆ ಒತ್ತಾಯಿಸಿದ್ದಾರೆ.
ತಾವು ಮಾಡಿರುವ ಆರೋಪ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್, ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಮತ್ತು ನನಗೂ ಸುಳ್ಳು ಪತ್ತೆ ಪರೀಕ್ಷೆ ಮಾಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಟ್ಯಾಂಕರ್ ಹಗರಣದ ಬಗ್ಗೆ ಎಸಿಬಿಗೆ ದೂರು ನೀಡಲಿದ್ದೇನೆ, ಪ್ರಕರಣ ಸಂಬಂಧ ಎಲ್ಲಾ ಸಾಕ್ಷಿಗಳನ್ನು ಎಸಿಬಿಗೆ ನೀಡಲಿದ್ದಾನೆ ಎಂದಿರುವ ಕಪಿಲ್ ಮಿಶ್ರಾ, ದೆಹಲಿ ಸಿಎಂ ವಿರುದ್ಧ ಮಾಡಿರುವ ಆರೋಪವನ್ನು ಯಾರೊಬ್ಬರು ಒಪ್ಪಿಕೊಳ್ಳದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.
ವಾಟರ್ ಟ್ಯಾಂಕರ್ ಹಗರಣದಲ್ಲಿ ಸಚಿವರಾದ ಅನೀಶ್ ತಲ್ವಾರ್ ಮತ್ತು ವೈಭವ್ ಪಟೇಲ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಎಂ ಕೇಜ್ರಿವಾಲ್ ಅವರಿಗೆ ಸತ್ಯೇಂದ್ರ ಜೈನ್ 2 ಕೋಟಿ ರು ಹಣ ನೀಡುತ್ತಿದ್ದದ್ದನ್ನು ನಾನು ನೋಡಿದೆ, ಅದನ್ನು ನೋಡಿದ ಮೇಲೆ ಇಡೀ ರಾತ್ರಿ ನನಗೆ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದರು. ಸಿಎಂ ವಿರುದ್ದ ಆರೋಪದ ನಂತರ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಗೊಳಿಸಲಾಗಿತ್ತು.