ದೇಶ

ಜಿಎಸ್ ಟಿ ಮಸೂದೆ ಅಂಗೀಕರಿಸಿದ ಗೋವಾ ವಿಧಾನಸಭೆ

Srinivas Rao BV
ಪಣಜಿ: ಗೋವಾ ವಿಧಾನಸಭೆಯಲ್ಲಿ ಮೇ.09 ರಂದು ಸರಕು ಮತ್ತು ಸೇವಾ ಕಾಯ್ದೆ ಮಸೂದೆ(ಜಿಎಸ್ ಟಿ)ಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. 
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜಿಎಸ್ ಟಿ ಮಸೂದೆ ಮಂಡಿಸಿದ ನಂತರ ಚರ್ಚೆ ನಡೆಸಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಜಿಎಸ್ ಟಿ ಕಾಯ್ದೆಯಿಂದ ತೆರಿಗೆ ವ್ಯವಸ್ಥೆ ಮತ್ತಷ್ಟು ಸರಳಗೊಳ್ಳಲಿದ್ದು, ಉದ್ಯಮ ಸಮುದಾಯ ಸೇರಿದಂತೆ ಹಲವು ವರ್ಗದವರಿಗೆ ಸಹಕಾರಿಯಾಗಲಿದೆ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ. 
ಜಿಎಸ್ ಟಿ ಜಾರಿಯಾದ ನಂತರ ರಾಜ್ಯಕ್ಕೆ ಸುಮಾರು 600-1000 ಕೋಟಿ ರೂಪಾಯಿ ಲಾಭ ಬರುವ ನಿರೀಕ್ಷೆ ಇದೆ ಎಂದು ಪರಿಕ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಹಾರ, ತೆಲಂಗಾಣ ಸೇರಿದಂತೆ ಒಟ್ಟು 8 ರಾಜ್ಯಗಳಲ್ಲಿ ಜಿಎಸ್ ಟಿ ಮಸೂದೆಯನ್ನು ಈಗಾಗಲೇ ಅಂಗೀಕರಿಸಲಾಗಿದ್ದು  ಜಿಎಸ್ ಟಿ ದೇಶಾದ್ಯಂತ ಜು.1 ರಿಂದ ಜಾರಿಗೆ ಬರಲಿದೆ. 
SCROLL FOR NEXT