ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ಐಟಿ + ಐಟಿ = ಐಟಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ಸಮೀಕರಣ

ಭಾರತ ದೇಶದ ಭವಿಷ್ಯದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಸಾಮಾನ್ಯ ಸಮೀಕರಣವನ್ನು ರೂಪಿಸಿದ್ದಾರೆ...

ನವದೆಹಲಿ: ಭಾರತ ದೇಶದ ಭವಿಷ್ಯದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಸಾಮಾನ್ಯ ಸಮೀಕರಣವನ್ನು ರೂಪಿಸಿದ್ದಾರೆ. ಅದು ಐಟಿ+ಐಟಿ= ಐಟಿ. 
ಸುಪ್ರೀಂ ಕೋರ್ಟ್ ನ ಹೊಸ ಡಿಜಿಟಲ್ ಫೈಲಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಐಟಿ ಎಂದರೇನು ಎಂಬುದಕ್ಕೆ ವ್ಯಾಖ್ಯಾನ ನೀಡಿದರು. ಇನ್ಫಾರ್ಮೇಶನ್ ಟೆಕ್ನಾಲಜಿ(ಮಾಹಿತಿ ತಂತ್ರಜ್ಞಾನ)+ ಇಂಡಿಯನ್ ಟಾಲೆಂಟ್(ಭಾರತೀಯ ಪ್ರತಿಭಾವಂತರು)= ಇಂಡಿಯಾ ಟುಮಾರ್ರೊ(ನಾಳಿನ ಭಾರತ).
ಸೀಮಿತಕ್ಕಿಂತ ದೇಶ ತಂತ್ರಜ್ಞಾನವನ್ನು ಹೆಚ್ಚು ಪರಿಣಾಮಕರ ರೀತಿಯಲ್ಲಿ ಸ್ವೀಕರಿಸಬೇಕು. ಇದರ ನಿಜವಾದ ಪ್ರಯೋಜನವನ್ನು ಗಳಿಸಲು ಸಮಾಜದ ಎಲ್ಲಾ ವರ್ಗದ ಜನರು ತಂತ್ರಜ್ಞಾನವನ್ನು ಬಳಸಲು ಆರಂಭಿಸಬೇಕು. ತಾಂತ್ರಿಕತೆಯನ್ನು ಬಳಸುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.
ಮನಸ್ಸಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಜನರ ಮನೋ ಸ್ಥಿತಿ ಬದಲಾಗಬೇಕು. ಅದು ಪರಿವರ್ತನೆಯ ಆರಂಭವಾಗಿದೆ. ಇದಕ್ಕೆ ತಂತ್ರಜ್ಞಾನವನ್ನು ಪರಿವರ್ತಿಸಬೇಕು. ಮನೋಭಾವ ಬದಲಾಗದಿದ್ದರೆ ಏನೂ ನಡೆಯುವುದಿಲ್ಲ ಎಂದು ಹೇಳಿದರು.
ಇದಕ್ಕೆ ಉದಾಹರಣೆ ಸಹಿತ ವಿವರಿಸಿದ ಪ್ರಧಾನಿ, ಯಾರಿಗಾದರೂ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದಾಗ ಅವರಲ್ಲಿ ನಂತರ ನನ್ನ ಸಂದೇಶ ಸಿಕ್ಕಿತೇ ಎಂದು ಕೇಳುತ್ತೇವೆ.  ಇಂತಹ ಹಳೆ ಮನೋಸ್ಥಿತಿ ಬದಲಾಗಬೇಕು ಎಂದು ಹೇಳಿದರು.
ಇ-ಆಡಳಿತದ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಸುಲಭವಾದ, ಪರಿಣಾಮಕಾರಿ ಮತ್ತು ಆರ್ಥಿಕವಾಗಿ ಉತ್ತಮವಾದದ್ದಾಗಿದೆ. ಇದು ಪರಿಸರ ಸ್ನೇಹಿ ಕೂಡ ಹೌದು. ಕಾಗದರಹಿತ ಕಚೇರಿಯಿಂದ ಪರಿಸರಕ್ಕೆ ಲಾಭವಿದೆ ಎಂದು ತಮ್ಮ ದೃಷ್ಟಿಕೋನವನ್ನು ವಿವರಿಸಿದರು.
ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ವ್ಯಾಜ್ಯಗಳನ್ನು ಬಗೆಹರಿಸಲು ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅನುಸರಿಸಬೇಕು. ಸುಪ್ರೀಂ ಕೋರ್ಟ್ ನಲ್ಲಿ ಡಿಜಿಟಲ್ ಮಾರ್ಗಗಳನ್ನು ಕಂಡುಕೊಂಡಿರುವುದು ಸರಿಯಾದ ದಿಕ್ಕಿನಲ್ಲಿ ಇಡುವ ಹೆಜ್ಜೆಯಾಗಿದೆ ಎಂದರು.
ಸಮಾಜದಲ್ಲಿರುವ ಬಡವರಿಗೆ ಕಾನೂನು ನೆರವು ನೀಡಲು ಸಾಮೂಹಿಕ ಚಳವಳಿ ನಡೆಸೋಣ ಎಂದು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT