ಶ್ರೀನಗರ: ಸೇನಾಧಿಕಾರಿ ಉಮ್ಮರ್ ಫಯಾಜ್ ಅವರನ್ನು ಅಪಹರಿಸಿ ಕೊಂದಿರುವುದು ಹಲವು ಬಿಎಸ್ ಎಫ್ ಯೋಧರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷ ಹೆಚ್ಚು -ಕಡಿಮೆ ಇದೇ ಸಮಯಕ್ಕೆ ಉಗ್ರ ಬುಹ್ರಾನ್ ಅಲಿಯನ್ನು ಕಾಶ್ಮೀರ ಕಣಿವೆಯಲ್ಲಿ ಕೊಲ್ಲಲಾಗಿತ್ತು. ಈ ವೇಳೆ ಬಿಎಸ್ ಎಫ್ ನೇಮಕಾತಿಯಲ್ಲಿ ನಬೀಲ್ ಅಹ್ಮದ್ ವನಿ ಟಾಪರ್ ಆಗಿದ್ದು, ಮಾಧ್ಯಮಗಳು ಅವರನ್ನು ಕಾಶ್ಮೀರದ ನಿಜವಾದ ಪೋಸ್ಟರ್ ಬಾಯ್ ಎಂದು ಹೊಗಳಿದ್ದವು.
ಆದರೆ ಇಂದು ವನಿ ತುಂಬಾ ಆತಂಕಗೊಂಡಿದ್ದಾರೆ. ಸೇನಾಧಿಕಾರಿ ಉಮ್ಮರ್ ಫಯಾಜ್ ಅಪಹರಣ ಮತ್ತು ಕೊಲೆ ನಂತರ ವನಿ ತಮ್ಮ ಕುಟಂಬಸ್ಥರ ಬಗ್ಗೆ ಚಿಂತಿಸುತ್ತಿದ್ದಾರೆ.
ನನ್ನ ಬಗ್ಗೆ ನನಗೆ ಭಯವಿಲ್ಲ, ಕಾಶ್ಮೀರದ ಗ್ರಾಮವೊಂದರಲ್ಲಿ ಒಂಟಿಯಾಗಿರುವ ನನ್ನ ತಾಯಿಯ ಬಗ್ಗೆ ಆತಂಕ ಮೂಡಿದೆ ಎಂದು ಹೇಳಿದ್ದಾರೆ. ಬಿಎಸ್ ಎಫ್ ಗೆ ಸೇರಿರುವ ಎಲ್ಲಾ ಕಾಶ್ಮೀರಗಳ ಬಗ್ಗೆ ಆತಂಕ ಮೂಡಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ನನಗೆ ಯಾವ ರೀತಿಯ ನಿರೀಕ್ಷೆಯೂ ಇಲ್ಲ, ಕಳೆದ ಹಲವು ವರ್ಷಗಳಿಂದ ಸರ್ಕಾರ ಜನರಿಗಾಗಿ ಏನು ಮಾಡಿಲ್ಲ. ಆದರೆ ಕೇಂದ್ರ ಸರ್ಕಾರದ ಮೇಲೆ ನನಗೆ ವಿಶ್ವಾಸ ವಿದೆ. ಸೇನೆ ಮತ್ತು ಅರೆ ಸೇನಾ ಪಡೆಗೆ ಸೇರ್ಪಡೆಗೊಂಡಿರುವ ಕಾಶ್ಮೀರಿಗಳ ರಕ್ಷಣೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಇಲ್ಲದಿದ್ದರೇ ಯಾರೋಬ್ಬರು ಸೇನೆಗೆ ಸೇರಲು ಮುಂದೆ ಬರುವುದಿಲ್ಲ ಎಂದು ಗ್ವಾಲಿಯ್ ಬಿಎಸ್ ಎಫ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ವನಿ ಹೇಳಿದ್ದಾರೆ.
ಕಳೆದ ವರ್ಷ ಬಿಎಸ್ ಎಫ್ ಗೇ ಸೇರಿದಾಗ ಹಿರಿಯ ಅಧಿಕಾರಿಗಳು ನನ್ನ ಕುಟುಂಬಕ್ಕೆ ಸೆಕ್ಯೂರಿಟಿ ನೀಡುವುದಾಗಿ ಹೇಳಿದ್ದರು, ಆದರೆ ಆ ವೇಳೆ ನಾನು ಅದನ್ನು ನಿರಾಕರಿಸಿದ್ದೆ. ಆದರೆ ಈಗ ಕೇವಲ ನನ್ನ ಕುಟುಂಬಕ್ಕೆ ಮಾತ್ರವಲ್ಲ, ಸೇನೆ ಸೇರಿರುವ ಎಲ್ಲಾ ಕಾಶ್ಮೀರಿ ಯೋಧರ ಕುಟುಂಬಗಳಿಗೆ ಭದ್ರತೆಯ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಸೇನಾಧಿಕಾರಿ ಉಮರ್ ಫಯಾಜ್ ಮೃತದೇಹ ಮತ್ತೆಯಾಗಿತ್ತು, ದೇಹಕ್ಕೆ ಹಲವು ಬಾರಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಮೂಲಗಳ ಪ್ರಕಾರ ಉಮರ್ ಫಯಾಜ್ ಅವರು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಈ ವೇಳೆ ಅವರು ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಉಗ್ರರು ಅವರನ್ನು ಅಪಹರಿಸಿದ್ದಾರೆ. ಬಳಿಕ ಅವರನ್ನು ಗುಂಡಿಟ್ಟು ಕೊಂದು ಶೋಪಿಯಾನ್ ನಲ್ಲಿ ಬಿಸಾಡಿ ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics