ದೇಶ

ಜಮ್ಮು-ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಪ್ರಾರಂಭಿಸಲು ಭಾರತಕ್ಕೆ ವಿಶ್ವಸಂಸ್ಥೆ ಒತ್ತಾಯ

Srinivas Rao BV
ಜಿನಿವಾ: ಜಮ್ಮು-ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆಗಳನ್ನು ಪುನಾರಂಭ ಮಾಡುವಂತೆ ಭಾರತಕ್ಕೆ ವಿಶ್ವಸಂಸ್ಥೆ ಒತ್ತಾಯಿಸಿದೆ. 
ವಾಟ್ಸ್ ಆಪ್, ಫೇಸ್ ಬುಕ್ ಟ್ವಿಟರ್ ಬಳಕೆ ಮಾಡದಂತೆ ಇಂಟರ್ ನೆಟ್ ಸೇವೆಗಳನ್ನು ಏ.17 ರಂದು ನಿರ್ಬಂಧಿಸಿದ್ದ ಕೇಂದ್ರ ಸರ್ಕಾರ ಒಟ್ಟು 22 ವೆಬ್ ಸೈಟ್ ಗಳ ಬಳಕೆಯನ್ನು ನಿರ್ಬಂಧಿಸಿತ್ತು.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ, ಇಂಟರ್ ನೆಟ್ ಸೌಲಭ್ಯಗಳಿಗೆ ನಿರ್ಬಂಧ ವಿಧಿಸಿರುವುದು ಕಾಶ್ಮೀರದ ಜನತೆಯ ಮೂಲಭೂತ ಹಕ್ಕುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ ಇಂತರ್ ನೆಟ್ ಸೇವೆಗಳನ್ನು ಕೂಡಲೇ ಪ್ರಾರಂಭಿಸಬೇಕೆಂದು ಭಾರತವನ್ನು ಆಗ್ರಹಿಸಿದೆ. 
ಕಾಶ್ಮೀರ ಕಣಿವೆಯಲ್ಲಿ ಉಗ್ರರ ಬೆಂಬಲಿಗರು ಸೇನೆಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು ಮಾಹಿತಿಯ ಹಂಚಿಕೆಯಾದರೆ ಅದು ಮತ್ತಷ್ಟು ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಲಿದೆ ಎಂಬ ಕಾರಣದಿಂದ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 
SCROLL FOR NEXT