ದೇಶ

ಈ ವರ್ಷ ಹೊಸ ಬಿ ಎಡ್ ಕಾಲೇಜುಗಳ ಆರಂಭವಿಲ್ಲ: ಪ್ರಕಾಶ್ ಜಾವದೇಕರ್

Sumana Upadhyaya
ನವದೆಹಲಿ: ಶಿಕ್ಷಕ ತರಬೇತಿ ಸಂಸ್ಥೆಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಈ ವರ್ಷ ಯಾವುದೇ ಹೊಸ ಬಿಎಡ್ ಕಾಲೇಜುಗಳ ಆರಂಭಕ್ಕೆ ಅವಕಾಶ ನೀಡುವುದಿಲ್ಲ  ಎಂದು ಹೇಳಿದೆ.
ಇಲ್ಲಿಯವರೆಗೆ ದಿನ ಬೆಳಗಾಗುವುದರೊಳಗೆ ಬಿಎಡ್ ಕಾಲೇಜುಗಳು ಹುಟ್ಟಿಕೊಳ್ಳುತ್ತಿದ್ದವು. ಅಂತಹ ಕಾಲೇಜುಗಳಲ್ಲಿ ಇಂದು ಹಣ ಕೊಟ್ಟರೆ ನಾಳೆ ಪದವಿ ಸಿಗುತ್ತದೆ. ಆದರೆ ಗುಣಮಟ್ಟ ಮಾತ್ರ ಶೂನ್ಯ. ಶಿಕ್ಷಕರ ತರಬೇತಿಯ ವಿಸ್ತಾರತೆಯನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನೆಲ್ಲಾ ನಿಲ್ಲಿಸಬೇಕಾಗಿದೆ. ಹೀಗಾಗಿ ಹೊಸ ಬಿ ಎಡ್ ಕಾಲೇಜುಗಳನ್ನು ತೆರೆಯಲಾಗುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಅದಲ್ಲದೆ ಈ ವರ್ಷದಿಂದ ಈಗಾಗಲೇ ಇರುವ ಕಾಲೇಜುಗಳ ಗುಣಮಟ್ಟ 
ಪರೀಕ್ಷೆ ಮಾಡಲಾಗುವುದು. ನಾವು ಗುಣಮಟ್ಟ ಅಫಿದವಿಟ್ಟು ಕೇಳಿದ್ದೇವೆ. ಇಲ್ಲಿಯವರೆಗೆ ಕೇವಲ 7,000 ಕಾಲೇಜುಗಳು ಮಾತ್ರ ಸಲ್ಲಿಸಿವೆ. ನಾವು ಸುಮಾರು 4,000 ಬಿ ಎಡ್ ಕಾಲೇಜುಗಳಿಗೆ ಶೋಕಾಸ್ ನೊಟೀಸ್ ಕಳುಹಿಸಿದ್ದೇವೆ ಎಂದರು.
ಬಿ ಎಡ್ ಮತ್ತು ಡಿ ಎಡ್ ಕೋರ್ಸ್ ಗಳಲ್ಲಿ ಪ್ರಾಯೋಗಿಕ ಘಟಕಗಳನ್ನು ಹೆಚ್ಚಿಸಲು ಕೂಡ ಸರ್ಕಾರ ನಿರ್ಧರಿಸಿದೆ.
SCROLL FOR NEXT